ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಡೆಯುವ ವಿವಿಧ ಸ್ಪರ್ಧೆಗಳು ಜು.20ರಿಂದ ಆರಂಭಗೊಳ್ಳಲಿದೆ.
ಜು.20ರಂದು ಅಂದ ಬರಹ ಸ್ಪರ್ಧೆಯು ಬೆಳಿಗ್ಗೆ ಗಂಟೆ 9.30ಕ್ಕೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ. 1 ರಿಂದ 2ನೇ ತರಗತಿ, 3 ರಿಂದ 4ನೇ ತರಗತಿ ಮತ್ತು 5 ರಿಂದ 7 ತರಗತಿಗಳಿಗೆ ಆಂಗ್ಲ ಮತ್ತು ಕನ್ನಡದಲ್ಲಿ ಅಂದ ಬರಹ ಸ್ಪರ್ಧೆ ನಡೆಯಲಿದೆ.
ಜು.27ಕ್ಕೆ ಬೆಳಿಗ್ಗೆ ಗಂಟೆ 9.30ರಿಂದ ಚದುರಂಗ ಸ್ಪರ್ಧೆಯು ನಡೆಯಲಿದೆ. ಆ.3ಕ್ಕೆ ಬೆಳಿಗ್ಗೆ ಗಂಟೆ 9.30ರಿಂದ ಶ್ರೀ ಗಣೇಶನ ವಿವಿಧ ಭಂಗಿಗಳ ಚಿತ್ರಕಲಾ ಸ್ಪರ್ಧೆಯು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ. ಜು.17ರಂದು ಬೆಳಿಗ್ಗೆ ಗಂಟೆ 9.30ರಿಂದ ಶ್ರೀ ಗಣೇಶೋತ್ಸವದ ಸಭಾ ವೇದಿಕೆಯಲ್ಲಿ ಭಕ್ತಿಗೀತೆ ಸ್ಪರ್ಧೆ ನಡೆಯಲಿದ್ದು, 1 ರಿಂದ 5ನೇ ತರಗತಿ, 6 ರಿಂದ 10ನೇ ತರಗತಿ, ಕಾಲೇಜು ವಿಭಾಗ ಮತ್ತು ಸಾರ್ವಜನಿಕರಿಗೆ ಈ ಸ್ಪರ್ಧೆ ನಡೆಯಲಿದೆ.
ಜು.24ರಂದು ಬೆಳಿಗ್ಗೆ ಗಂಟೆ 9.30ರಿಂದ ಗಣೇಶೋತ್ಸವ ಸಭಾ ವೇದಿಕೆಯಲ್ಲಿ 1 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 11ನೇ ಅಧ್ಯಾಯದ 10 ಶ್ಲೋಕಗಳ ಭಗವದ್ಗೀತಾ ಕಂಠಪಾಠ ಸ್ಪರ್ಧೆ ನಡೆಯಲಿದೆ. ಆ.27ರಂದು ಬೆಳಿಗ್ಗೆ ಗಂಟೆ 10ರಿಂದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕರ ವಿಭಾಗದಲ್ಲಿ ರಂಗವಲ್ಲಿ ಸ್ಪರ್ಧೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಮಹಡಿಯಲ್ಲಿ ನಡೆಯಲಿದೆ. ಅದೇ ದಿನ ಬೆಳಿಗ್ಗೆ ಗಂಟೆ 11ಕ್ಕೆ 15 ವರ್ಷದ ಒಳಗಿನ ಮಕ್ಕಳಿಗೆ ದೇವಳದ ಸಭಾ ಭವನದ ಮಹಡಿಯಲ್ಲಿ ಶ್ರೀ ಗಣೇಶ ವಿಗ್ರಹ ರಚನೆ ಸ್ಪರ್ಧೆ ನಡೆಯಲಿದೆ. ಎಲ್ಲಾ ಸ್ಪರ್ಧಿಗಳು ಸ್ಪರ್ಧೆಯ ಅರ್ಧಗಂಟೆ ಮುಂಚಿತವಾಗಿ ಸ್ಥಳದಲ್ಲಿ ಉಪಸ್ಥಿತಿಯಲ್ಲಿರಬೇಕೆಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448870106, 9449488080, 9845701676, 9663553434, 9482488037 ಅನ್ನು ಸಂಪರ್ಕಿಸುವಂತೆ ಸಮಿತಿ ಪ್ರಕಟಣೆ ತಿಳಿಸಿದೆ.