ಉಪ್ಪಿನಂಗಡಿ: ಇಲ್ಲಿನ ಬೊಳ್ಳಾವು ಮನೆತನದ ವೆಂಕಟರಮಣ ಭಟ್ ಅವರ ಪತ್ನಿ ಲಕ್ಷ್ಮೀಯಮ್ಮ ಜು.18ರಂದು ಅಲ್ಪಕಾಲದ ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನ ಹೊಂದಿದರು. ಮೂಲತಃ ಬೊಳ್ಳಾವು ನಿವಾಸಿಯಾಗಿರುವ ಇವರು ಪುತ್ರನೊಂದಿಗೆ ಮೈಸೂರಿನಲ್ಲಿ ವಾಸವಿದ್ದು, ಮೃತರ ಅಂತಿಮ ಕಾರ್ಯಗಳನ್ನು ಬೊಳ್ಳಾವಿನಲ್ಲಿ ನಡೆಸಲಾಯಿತು. ಮೃತರು ಪತಿ, ಪುತ್ರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
