ಉಪ್ಪಿನಂಗಡಿ: ತನ್ನ ಅವಿರತ ಶ್ರಮ ಹಾಗೂ ಪರಿಶ್ರಮದ ಮೂಲಕ ಎಐಸಿಸಿ ಹಾಗೂ ಕೆಪಿಸಿಸಿಯ ಮಧ್ಯೆ ಸಮನ್ವಯ ಸಾಧಿಸಿ ಅತ್ಯಂತ ಅಲ್ಪಾವಧಿಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ಸಿನಿಂದ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನ್ನು ಬೇರ್ಪಡಿಸಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಒಂದನೇ ವಾರ್ಡಿನ ಸದಸ್ಯರೂ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸುತ್ತಿರುವ ಮಹಮ್ಮದ್ ತೌಸೀಫ್ ಯು.ಟಿ ಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರನ್ನು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನಿಂದ ಮಹಮ್ಮದ್ ತೌಸೀಫ್ ಯು ಟಿ.ಯವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.

ಡಾ. ರಾಜಾರಾಮ್, ಪ್ರಸನ್ನ ಕುಮಾರ್ ಸಿಝ್ಲರ್, ನಝೀರ್ ಮಠ, ಆದು ಕೊಪ್ಪಳ, ಶಬೀರ್ ಕೆಂಪಿ, ವಿನಾಯಕ ಪೈ, ಜಯಪ್ರಕಾಶ್ ಬದಿನಾರು, ಸತೀಶ್ ನಿಡ್ಪಳ್ಳಿ, ಉಮೇಶ್ ರಾಮನಗರ, ಇರ್ಷಾದ್ ಯು ಟಿ, ಬಶೀರ್ ಪರ್ಲಡ್ಕ, ಅನಿ ಮಿನೇಜಸ್, ಶುಕೂರ್ ಮೇದರಬೆಟ್ಟು, ವೆಂಕಪ್ಪ, ಫೌಝರ್ ಯು. ಟಿ, ರಫೀಕ್ ಕೆರಮೂಲೆ, ಶುಕೂರ್ ಎಷ್ಟೂ, ರಿಜ್ವಾನ್ ಎವೈಎಂ, ಖಾದರ್ ನೆಕ್ಕಿಲಾಡಿ ಉಪಸ್ಥಿತರಿದ್ದರು.