ಆಲಂಕಾರು: ಮಾರುತಿ ಆಲ್ಟೋ ಕಾರು 35 ಅಡಿ ಕಂದಕಕ್ಕೆ – ಪ್ರಾಣಪಾಯದಿಂದ ಪಾರು

0

ಆಲಂಕಾರು: ರಾಜ್ಯ ಹೆದ್ದಾರಿ ಆಲಂಕಾರಿನ ಕಲ್ಲೇರಿ ಎಂಬಲ್ಲಿ 35 ಅಡಿ ಕಂದಕಕ್ಕೆ ಆಲ್ಟೊ ಕಾರೊಂದು ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರದ ಘಟನೆ ನಡೆದಿದೆ.

ನಿಂತಿಕಲ್ಲು ಅಲೆಕ್ಕಾಡಿ ಧನರಾಜ್ ಎಂಬವರ ಮಾರುತಿ ಕಾರಿನಲ್ಲಿ ಶಿವಪ್ರಸಾದ್ ಎಂಬವರು ತನ್ನ ಸಂಬಂಧಿಕರನ್ನು ನಿನ್ನೆ ತಡರಾತ್ರಿ ಆಲಂಕಾರಿನಲ್ಲಿ ಬಿಟ್ಟು ಬರುತ್ತಿದ್ದ ವೇಳೆ ಮಳೆ ಬರುತ್ತಿರುವ ಸಂದರ್ಭದಲ್ಲಿ ಯಾವುದೋ ಪ್ರಾಣಿ ಬಂದಂತೆ ಗೋಚರಿಸಿದ ಹಿನ್ನಲೆ ರಸ್ತೆಯ ಬದಿಗೆ ಆಲ್ಟೋ ಕಾರನ್ನು ತಿರುಗಿಸಿದ ವೇಳೆ ಅಂದಾಜು 35 ಅಡಿ ಕಂದಕಕ್ಕೆ ಆಲ್ಟೊ ಕಾರು ಬಿದ್ದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜು.21ರಂದು ಬೆಳಿಗ್ಗೆ ಕ್ರೈನ್ ಮೂಲಕ ಆಲ್ಟೊ ಕಾರನ್ನು ಕಂದಕದಿಂದ ಹೊರ ತೆಗೆಯಲಾಯಿತು.

ಆಲಂಕಾರು ಕಲ್ಲೇರಿಯಿಂದ ಶರವೂರು ತನಕ ರಾಜ್ಯ ಹೆದ್ದಾರಿಯಲ್ಲಿ ಅನೇಕ ವಾಹನಗಳು ಸಂಚರಿಸುತ್ತಿದ್ದು, ಈ ಭಾಗದಲ್ಲಿ ಹಲವು ಬಾರಿ ವಾಹನಗಳು ಅಪಘಾತ ಸಂಭವಿಸುತ್ತಿದೆ. ಈ ಬಗ್ಗೆ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯಗಳು ಕೇಳಿ ಬರುತ್ತಿದೆ.


LEAVE A REPLY

Please enter your comment!
Please enter your name here