ಪುತ್ತೂರು: ಪರ್ಪುಂಜ ಸ್ನೇಹ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಆ.15 ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ನಡೆಯುವ 21 ವರುಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜು.21 ರಂದು ಪರ್ಪುಂಜ ಶ್ರೀ ಬ್ರಹ್ಮಬೈದೆರ್ಕಳ ಗರಡಿ ರಾಮಜಲುವಿನಲ್ಲಿ ನಡೆಯಿತು.
ಸ್ನೇಹ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಪ್ರೇಮ್ರಾಜ್ ರೈ ಪರ್ಪುಂಜರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ರಾಜೇಶ್ ರೈ ಪರ್ಪುಂಜ, ಅನಿಲ್ ರೈ ಬಾರಿಕೆ, ಅಧ್ಯಕ್ಷ ವಿಪಿನ್ ಶೆಟ್ಟಿ ,ಕಾರ್ಯದರ್ಶಿ ನಿತಿನ್ ಗೌಡ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ .ಯಸ್ ಹಾಗೂ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಸದಸ್ಯರುಗಳಾದ ರಾಕೇಶ್ ರೈ, ರಾಜೇಶ್ ಗೌಡ ,ರಾಜೇಶ್ ಪೂಜಾರಿ ,ಸುರೇಶ್ ಪೂಜಾರಿ, ಅಶ್ವಿನ್, ಕಿಶನ್ ,ಧನುಷ್ ,ದಿನೇಶ್ ಗೌಡ, ನಾಗೇಶ್ ಗೌಡ, ಸುರೇಶ್ ನಾಯಕ್, ಪ್ರಜ್ವಲ್, ಭವಿಶ್ ,ರಾಧಾಕೃಷ್ಣ ಗೌಡ, ನೂತನ್, ಶಮನ್ ಹಾಗೂ ಮಹಿಳಾ ಮಂಡಲದ ಸದಸ್ಯರುಗಳಾದ ರೇಖ ರೈ, ವಿನೋದ ,ಶ್ರೀಮತಿ, ಸಾವಿತ್ರಿ, ಪೂರ್ಣಿಮಾ, ಸುಶೀಲ, ಸುಂದರಿ, ರೋಹಿಣಿ, ಮೀನಾಕ್ಷಿ, ಕಮಲ, ಹೇಮಲತಾ ಹಾಗೂ ಶ್ರೇಯ ಉಪಸ್ಥಿತರಿದ್ದರು.