ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ತಯಾರಿಯ ಸಲುವಾಗಿ ಬೃಹತ್ 50 ಅಡಿಯ ಕೇಸರಿ ಧ್ವಜ ಸ್ತಂಭವನ್ನು ವಿವೇಕಾನಂದ ಪ್ರತಿಮೆಯ ಬಳಿ ಸ್ಥಾಪಿಸಲಾಯಿತು.

ರಾಷ್ಟೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ರವೀಂದ್ರ ಪಿ, ಯುವ ನಾಯಕ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಪುತ್ತೂರು ನಗರ ಮಂಡಲದ ಅಧ್ಯಕ್ಷರಾದ ನಿತೇಶ್ ಕಲ್ಲೇಗ ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು. ಯುವ ವಕೀಲರಾದ ಪ್ರಜ್ವಲ್ ಸ್ವಾಗತಿಸಿದರು.