ಸನಾತನ ಪದಕ್ಕೆ ಬಹಳಷ್ಟು ಶಕ್ತಿ ಇದೆ : ಮಾಣಿಲ ಶ್ರೀ
ಶ್ರೀಗಳ ಸಂಕಲ್ಪ ಶಕ್ತಿ ಇಲ್ಲಿ ಸಾಕಾರವಾಗಿದೆ: ವಿಜಯಲಕ್ಷ್ಮಿ ಅಮ್ಮ
ವಿಟ್ಲ: ಸವಾಲನ್ನು ಸ್ವೀಕರಿಸಿ ಮುನ್ನಡೆದಿದ್ದೇನೆ. ತಾಯಿಯ ಶ್ರೀ ರಕ್ಷೆಯಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಾಗಿದೆ. ವರಮಹಾಲಕ್ಷ್ಮೀ ವೃತಾಚರಣೆಯಂದೇ ಕ್ಷೇತ್ರದ ಹುಟ್ಟಾಗಿದೆ. ದುಶ್ಚಟ, ವಾಮಾಚಾರ ಮೊದಲಾದ ಪಿಡುಗನ್ನು ತಡೆಗಟ್ಟುವ ಕೆಲಸ ಕಳೆದ ಇಪ್ಪತೈದು ವರುಷಗಳಿಂದ ಕ್ಷೇತ್ರದಿಂದ ಆಗಿದೆ. ಹೊಗಳುವವರಿಗಿಂದ ತೆಗಳುವವರನ್ನು ನಾನು ಅತೀ ಹೆಚ್ಚು ಪ್ರೀತಿಸುತ್ತೇನೆ. ಪರಿವರ್ತನೆ, ಪರಿಮಾರ್ಜನೆಗೆ ತೆಗಳುವಿಕೆ ಅಗತ್ಯ. ಸನಾತನ ಪದಕ್ಕೆ ಬಹಳಷ್ಟು ಶಕ್ತಿ ಇದೆ ಎಂದು ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಜು.27ರಂದು ಶ್ರೀಧಾಮ ದಲ್ಲಿ ನಡೆದ 36ನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.


ಬೆಂಗಳೂರಿನ ವಿಜಯಲಕ್ಷ್ಮಿ ಅಮ್ಮರವರು ಮಾತನಾಡಿ, ನಿತ್ಯಾನಂದರ ಕೃಪೆಯಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯವಾಗಿದೆ. ಧೈರ್ಯ ನಿಮ್ಮೊಳಗಿದ್ದರೆ ಏನನ್ನು ಸಾಧಿಸಲು ಸಾಧ್ಯ. 48 ದಿನಗಳ ಲಕ್ಷ್ಮೀ ಪೂಜೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಶ್ರೀಗಳ ಸಂಕಲ್ಪ ಶಕ್ತಿ ಅವೆಲ್ಲವನ್ನು ಸಾಕಾರಮಾಡಿದೆ. ನಿಜವಾದ ಭಕ್ತಿ, ನಂಬಿಕೆ ಇದ್ದರೆ ದೇವರು ಒಲಿಯಲು ಎಂದರು.
ತುಳು ರಂಗಭೂಮಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್, ಬೆಳ್ಳಾರೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ನಾಯರ್ ಬೆಳ್ಳಾರೆ, ಉಪನ್ಯಾಸಕ ಗೋವಿಂದ ಭಟ್ ಕನ್ನಡಗುಳಿ, ಪ್ರಮುಖರಾದ ಚಂದ್ರಕುಮಾರ್ ಕೊಡಿಯಾಲ್ ಬೈಲ್, ಮಹಾಲಕ್ಷ್ಮಿಯ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ನ ಮಧುಸೂದನ್ ನಾಯಕ್ ಸ್ವಾಗತಿಸಿದರು. ಬಿ. ಸೋಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.