ಸಂಘಕ್ಕೆ 2 ಕೋಟಿ ಲಾಭ,ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ ಮಾಡಿದ ಅಧ್ಯಕ್ಷ ಚಿದಾನಂದ ಬೈಲಾಡಿ
ಪುತ್ತೂರು:ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ಮಣಾಯಿ ಆರ್ಚ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಯವರ ಅಧ್ಯಕ್ಷೆಯಲ್ಲಿ ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲದಲ್ಲಿ ಆ.3ರಂದು ನಡೆಯಿತು.



ಸಂಘಕ್ಕೆ 2 ಕೋಟಿ ಲಾಭ, ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ ಮಾಡಿದ ಅಧ್ಯಕ್ಷ ಚಿದಾನಂದ ಬೈಲಾಡಿ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಮಾತನಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ನಲ್ಲಿ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಹಾಗೂ ಶಾಖೆಯನ್ನು ಹೊಂದಿದ್ದು,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಎಸ್ಎಂಟಿ ಶಾಖೆ ,ಕಡಬ,ಉಪ್ಪಿನಂಗಡಿ,ನೆಲ್ಯಾಡಿ,ಕುಂಬ್ರ, ಆಲಂಕಾರು, ಕಾಣಿಯೂರು,ಬೆಳ್ಳಾರೆ, ವಿಟ್ಲ ಶಾಖೆಯನ್ನು ಹೊಂದಿರುವ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ರೂ.744 ಕೋಟಿಯ ದಾಖಲೆಯ ವ್ಯವಹಾರ ಮಾಡಿ ರೂ.2,01,50,812 ಕೋಟಿ ಲಾಭ ಗಳಿಸುವ ಮೂಲಕ ಯಶಸ್ವಿ ಸಾಧನೆ ಮಾಡಿದೆ.ಈ ಹಿನ್ನೆಲೆಯಲ್ಲಿ ಇಲಾಖಾ ನಿಯಮದಂತೆ ಈ ಬಾರಿ ಶೇ.15 ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಘೋಷಣೆ ಮಾಡಿದರು.ಈ ಬಾರಿ ಮೊತ್ತದ ದಾಖಲೆಯ ರೂ. 138 ಕೋಟಿ ಡೆಪೋಸಿಟ್ ಆಗಿದ್ದು, ರೂ. 136 ಕೋಟಿ ಸಾಲ ವಿತರಣೆ ನಡೆಸಿದೆ.ಸಾಲ ವಸೂಲಾತಿಯಲ್ಲಿ ಮಹತ್ತರವಾದ ಸಾಧನೆ ಮಾಡಿದ್ದು ಶೇ.99.18% ಸಾಲ ವಸೂಲಾತಿಯಾಗಿದ್ದು ಸಂಘವು ಅತ್ಯಂತ ವೇಗದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಸಂಘವು ಐದು ವರ್ಷದಲ್ಲಿ ಐದು ಶಾಖೆಗಳ ಆರಂಭ, ಜೊತೆಗೆ ಜಿಲ್ಲಾ ಸಹಕಾರಿ ಬ್ಯಾಂಕ್ ನಿಂದ ಚಿನ್ನದ ನಾಣ್ಯದ ಪುರಸ್ಕಾರ
ಒಕ್ಕಲಿಗ ಗೌಡ ಸೇವಾ ಸಂಘದ ಆಡಿಯಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು, ಸಮುದಾಯದ ಹಿರಿಯರ ಅರ್ಥಿಕ ಸಂಸ್ಥೆಯ ಆರಂಭಿಸುವ ಯೋಚನೆಯಂತೆ ಸಂಘವು 2002ರಲ್ಲಿ ಆರಂಭಗೊಂಡು ಅತ್ಯಂತ ಯಶಸ್ವಿಯಾಗಿ ಮುನ್ನಡೆದು 2020 ವರಿಗೆ 5 ಶಾಖೆಗಳನ್ನು ಆರಂಭಿಸಿ,ವ್ಯವಹಾರ ನಡೆದು, ನಂತರದ 5 ವರ್ಷಗಳಲ್ಲಿ 5 ಶಾಖೆಗಳನ್ನು ಆರಂಭಿಸಿದ ಸಾಧನೆ ಸಂಘದಾಗಿದೆ. ಜೊತೆಗೆ ಸಂಘದ ಸಾಧನೆಯನ್ನು ಗಮನಿಸಿ ಕೇಂದ್ರ ಜಿಲ್ಲಾ ಸಹಕಾರಿ ಸಂಘದಿಂದ ಚಿನ್ನದ ನಾಣ್ಯದ ಪುರಸ್ಕಾರ ಸಂಘಕ್ಕೆ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಸಂಘದ ಪ್ರತಿ ತಿಂಗಳ ಆಡಳಿತ ಮಂಡಳಿ ಸಭೆ, ಪ್ರತಿ ಶಾಖೆಗಳ ಸಲಹಾ ಸಮಿತಿಗಳ ಸಭೆ, ಶಾಖಾ ಮೆನೇಜರ್ ಗಳ ಸಭೆ ಮಾಡುವ ಜೊತೆಗೆ ಸಿಬ್ಬಂದಿ ವರ್ಗದ ವರ ಸಹಕಾರದಿಂದ ಸಂಸ್ಥೆ ಬೆಳವಣಿಗೆಯಾಗಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದರು.
ಲೆಕ್ಕ ಪರಿಶೋಧನೆಯಲ್ಲಿ ಸತತ ’ಎ’ ತರಗತಿ
ಕಳೆದ ಹಲವು ವರ್ಷಗಳಿಂದ ಸಂಘವು ಲೆಕ್ಕಪರಿಶೋಧನೆಯಲ್ಲಿ ಸತತ ’ಎ’ ತರಗತಿ ಶ್ರೇಣಿಯನ್ನು ಪಡೆಯುತ್ತ ಬಂದಿದ್ದು , ಪ್ರಸ್ತುತ ಸಂಘವು ಸುಮಾರು 7693 ಸದಸ್ಯರನ್ನು ಹೊಂದಿದ್ದು, ರೂ. 5 ಕೋಟಿ 40 ಲಕ್ಷ ಪಾಲು ಬಂಡವಾಳ ಹೊಂದಿದೆ,ಸಲಹಾ ಸಮಿತಿಯವರ ಸಲಹೆ ಹಾಗೂ ಸೂಚನೆಯಂತೆ ಆಡಳಿತ ಮಂಡಳಿಯ ಸಹಕಾರದಿಂದ ಸಂಘವು ಉತ್ತಮ ಲಾಭಾಂಶದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಹೇಳಿದರು.
ಹಿರಿಯರ ಪರಿಶ್ರಮದಿಂದ ಸಂಘವು ದೊಡ್ಡ ಮಟ್ಟದಲ್ಲಿ ಬೆಳೆದಿದೆ – ಮೋಹನ್ ಗೌಡ ಇಡ್ಯಡ್ಕ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಪ್ರವರ್ತಕರಾದ ಮೋಹನ್ ಗೌಡ ಇಡ್ಯಡ್ಕ ಮಾತನಾಡಿ 2002ರ ಆರಂಭದ ಹಂತದಲ್ಲಿ ಹಿರಿಯರು ಹಾಕಿ ಕೊಟ್ಟ ಭದ್ರಬುನಾದಿ ಮತ್ತು ಅವರುಗಳ ಶ್ರಮದಿಂದ ಸಂಘವು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವ್ಯವಹಾರ ಕ್ಷೇತ್ರದಲ್ಲಿ ಛಲ ಮತ್ತು ಹಠವಿದ್ದಲ್ಲಿ ಯಾವುದೇ ಸಾಧನೆಯನ್ನು ಸಾಧಿಸಬಹುದು ಎಂಬುದನ್ನು ಆಡಳಿತ ಮಂಡಳಿ ಮಾಡಿ ತೋರಿಸಿದೆ,ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ ಜಿಲ್ಲಾ ಮಟ್ಟದಲ್ಲೇ ಮಾದರಿ ಸಂಘವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಹಕಾರಿ ಸಂಘವು 10 ಶಾಖೆಯಿಂದ 100 ಶಾಖೆಗಳಿಗೆ ಅಭಿವೃದ್ಧಿ ಹೊಂದಲಿ- ರವಿ ಮಂಗ್ಲಿಮನೆ
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ರವಿ ಮಂಗ್ಲಿಮನೆ ಮಾತನಾಡಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಪ್ರಸ್ತುತ 10 ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ 100 ಶಾಖೆಗಳನ್ನು ಆರಂಭಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸಂಘವು 25 ನೇ ವರ್ಷದಲ್ಲಿ 10 ಸಾವಿರ ಸದಸ್ಯರನ್ನು ಮತ್ತು ರೂ 1 ಸಾವಿರ ಕೋಟಿ ವ್ಯವಹಾರ ಮಾಡುವಂತಾಗಲಿ -ಗೋಪಾಲಕೃಷ್ಣ ಪಟೇಲ್ ಚಾರ್ವಾಕ
ಸಂಘದ ಸದಸ್ಯರ ಅಭಿಪ್ರಾಯ ಅವಧಿಯಲ್ಲಿ ಮಾತನಾಡಿದ ಸಂಘದ ಸದಸ್ಯರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಮಾತನಾಡಿ ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ ಮತ್ತು ಶ್ರಮದಿಂದ,ಹಾಗೂ ಸಿಬ್ಬಂದಿ ವರ್ಗದ ನಗುಮೊಗದ ಸೇವೆಯಿಂದ ಸಂಘವು ಅತ್ಯುತ್ತಮ ಪಥದಲ್ಲಿ ಅಮೋಘ ಸಾಧನೆಯನ್ನು ಮಾಡಿದೆ,ಸಂಘವು 25 ನೇ ವರ್ಷಕ್ಕೆ 10 ಸಾವಿರ ಸದಸ್ಯರನ್ನು ಒಳಗೊಂಡು ರೂ 1 ಸಾವಿರ ಕೋಟಿ ವ್ಯವಹಾರ ಮಾಡುವಂತಾಗಲಿ ಎಂದು ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಕಾರ್ಯಕ್ರಮ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮಹಾಸಭೆಯಲ್ಲಿ ಸಂಘದ ಒಟ್ಟು 10 ಶಾಖೆಗಳ 140 ಸಲಹಾ ಸಮಿತಿ ಸದಸ್ಯರ ಪೈಕಿ ಉತ್ತಮ ಸಲಹಾ ಸಮಿತಿ ಸದಸ್ಯರನ್ನಾಗಿ ಉಪ್ಪಿನಂಗಡಿ ಶಾಖೆಯ ವೆಂಕಪ್ಪ ಗೌಡ ಮತ್ತು ಮತ್ತು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಕೊಳ್ತಿಗೆ ಗ್ರಾಮದ ದೊಡ್ಡಮನೆ ತಿರುಮಲೇಶ್ವರ ಗೌಡ ಹೇಮಮಾಲಿನಿ ದಂಪತಿಗಳ ಪುತ್ರಿ ಧರಣಿ ಕೆ ಟಿ ಇವರನ್ನು ಶಾಲು ಹೊದಿಸಿ,ಹಾರ ಹಾಕಿ ಸ್ಮರಣಿಕೆ ಪಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಆರ್ಥಿಕ ಸಹಾಹಧನ ವಿತರಣೆ
ಸಂಘದ ಸದಸ್ಯರಾದ ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಭವ್ಯ ನಗರ,ಪ್ರವೀಣ್ ಬೆಳ್ಳಾರೆ,ಬಾಲಕೃಷ್ಣ ಉರ್ವ ಇವರುಗಳಿಗೆ ಆರ್ಥಿಕ ಸಹಾಯಧನ ಚೆಕ್ ವಿತರಣೆ ಮಾಡಲಾಯಿತು.
ಅತ್ಯುತ್ತಮ ಸಾಧನೆ ಮಾಡಿದ ಶಾಖೆಗಳಿಗೆ ಪ್ರಮಾಣ ಪತ್ರ ಪ್ರದಾನ
ಸಂಘದ ಕಳೆದ ಆರ್ಥಿಕ ವರ್ಷದಲ್ಲಿ 10 ಶಾಖೆಗಳ ಸೇವೆಯನ್ನು ಗುರುತಿಸಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಯಿತು. ಉತ್ತಮ ನಿರ್ವಹಣೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಉಪ್ಪಿನಂಗಡಿ ಶಾಖೆ,ದ್ವಿತೀಯ ಸ್ಥಾನ ಪಡೆದ ಎಪಿಯಂಸಿ ಶಾಖೆ, ತೃತೀಯ ಸ್ಥಾನ ಪಡೆದ ಕಡಬ ಶಾಖೆ, ಸಾಲ ಮತ್ತು ಠೇವಣಿಯಲ್ಲಿ ಉತ್ತಮ ಸಾದನೆ ಮಾಡಿದ ನೆಲ್ಯಾಡಿ ಶಾಖೆ,ಲಾಭಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಕುಂಬ್ರ ಶಾಖೆ,ಲಾಭಾಂಶದಲ್ಲಿ ತೃಪ್ತಿಕರ ಸಾಧನೆ ಮಾಡಿದ ಆಲಂಕಾರು ಶಾಖೆ, ಉತ್ತಮ ನಿರ್ವಹಣೆ ವಿಭಾಗದಲ್ಲಿ ಚತುರ್ಥ ಸ್ಥಾನ ಪಡೆದ ಎಸ್ ಎಂ ಟಿ ಶಾಖೆ, ಸಾಲ ಮತ್ತು ಠೇವಣಿಯಲ್ಲಿ ತೃಪ್ತಿಕರ ಸಾಧನೆ ಮಾಡಿದ ಕಾಣಿಯೂರು ಶಾಖೆ, ಅಲ್ಪ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಬೆಳ್ಳಾರೆ ಶಾಖೆ, ಪ್ರೋತ್ಸಾಹಕ ಬಹುಮಾನಕ್ಕೆ ಪಾತ್ರರಾದ ವಿಟ್ಲ ಶಾಖೆಯ ಸೇವೆಯನ್ನು ಗುರುತಿಸಿ ಶಾಖಾ ಸಲಹಾ ಸಮಿತಿ ಸದಸ್ಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಶಾಲು ಹಾಕಿ,ಹೂಗುಚ್ಛ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮ ನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ನಿರ್ವಹಿಸಿದರು.ಮಾಜಿ ನಿರ್ದೇಶಕರಾದ ಚಂದ್ರಶೇಖರ ಬ್ರಾಂತೊಡು,ಸಾವಿತ್ರಿ ಆರ್ ಕೆ,ವಿಜಯ ಕೇಶವ ಗೌಡ,ಶಿವರಾಮ ಗೌಡ ಇದ್ಯಾಪೇ, ನಾರಾಯಣ ಗೌಡ ಆರ್ವಾರ,ರೇಖಾ ಆರ್ ಗೌಡ, ಹೂಗುಚ್ಛ, ಶಾಲು ಇವರುಗಳನ್ನು ಗೌರವಿಸಲಾಯಿತು.
ಮಹಾಸಭೆಯಲ್ಲಿ ವಾರ್ಷಿಕ ತಿಳುವಳಿಕೆ ಪತ್ರವನ್ನು ಎಪಿಎಂಸಿ ಶಾಖೆಯ ಮ್ಯಾನೇಜರ್ ತೇಜಸ್ವಿನಿ, 2023-24ನೇ ಸಾಲಿನ ಮಹಾಸಭೆಯ ನಡವಳಿಕೆಯನ್ನು, ನೆಲ್ಯಾಡಿ ಶಾಖೆಯ ಮೆನೇಜರ್ ವಿನೋದ್ ರಾಜ್, 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ಉಪ್ಪಿನಂಗಡಿ ಶಾಖೆಯ ಮ್ಯಾನೇಜರ್ ರೇವತಿ ಹೆಚ್, 2024-25ನೇ ಸಾಲಿನ ಜಮಾ ಖರ್ಚಿನ ವಿವರವನ್ನು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ, 2024- 25 ನೇ ಸಾಲಿನ ಲೆಕ್ಕ ಪರಿಶೋಧನೆಯ ವರದಿಯ ನ್ಯೂನತೆ ಮತ್ತು ಸಮಜಾಯಿಸಿಕೆ ವರದಿಯನ್ನು ಕಡಬ ಶಾಖೆಯ ಮೇನೇಜರ್ ಶಿವಪ್ರಸಾದ್ , 2024-25ನೇ ಸಾಲಿನಲ್ಲಿ ಅಂದಾಜು ಬಜೆಟ್ ಗಿಂತ ಜಾಸ್ತಿ ಖರ್ಚಾದ ಐಮೇಜ್ ವಿವರವನ್ನು ಕುಂಬ್ರ ಶಾಖೆಯ ಮ್ಯಾನೇಜರ್ ಹರೀಶ್ ವೈ, 2025-26ನೇ ಸಾಲಿನ ಅಂದಾಜು ಆಯಾದ ವಿವರವನ್ನು ವಿಟ್ಲ ಶಾಖೆಯ ಮ್ಯಾನೇಜರ್ ದಿನೇಶ್ ಪೇಲತಿಂಜ ವಾಚಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ,ಜಿನ್ನಪ್ಪ ಗೌಡ ಮಲುವೆಲು,ಸುದರ್ಶನ್ ಗೌಡ ಕೋಡಿಂಬಾಳ, ಸಂಜೀವ ಗೌಡ ಕೆ, ಪ್ರವೀಣ್ ಕುಂಟ್ಯಾನ, ಲೋಕೇಶ್ ಚಾಕೋಟೆ, ಸುಪ್ರೀತಾ ರವಿಚಂದ್ರ, ತೇಜಸ್ವಿನಿ ಶೇಖರ ಗೌಡ, ಆಂತರಿಕ ಲೆಕ್ಕ ಪರಿಶೋಧಕರು ಶ್ರೀಧರ ಗೌಡ ಕಾಣಜಾಲು, ಆಲಂಕಾರು ಶಾಖೆಯ ಮೆನೇಜರ್ ಪ್ರೀತಮ್, ಕಾಣಿಯೂರು ಶಾಖೆಯ ಮ್ಯಾನೇಜರ್ ಪದ್ಮಶ್ರೀ ಪಿ, ಬೆಳ್ಳಾರೆ ಶಾಖೆಯ ಮೇಲೆ ಕಾರ್ತಿಕ್ ಎಂ ಸಂಘದ ಸಿಬ್ಬಂದಿಗಳಾದ ನಿಶ್ಚಿತಾ ಯು.ಡಿ,ರೇವತಿ, ತೇಜಸ್ವಿನಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷರಾದ ಯು ಪಿ ರಾಮಕೃಷ್ಣ ಗೌಡ ಸ್ವಾಗತಿಸಿದರು. ನಿರ್ದೇಶಕರಾದ ಸತೀಶ್ ಪಾಂಬಾರು ವಂದಿಸಿದರು. ಮಹಾಸಭೆಯಲ್ಲಿ 1000ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದ್ದರು.
ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.