ಪುತ್ತೂರು: ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನೇಯ, ಏ ಎಸ್ ಐ ಶ್ರೀ ಪುಟ್ಟಸ್ವಾಮಪ್ಪ, ಸಿಬ್ಬಂದಿಗಳಾದ ಶಿವರಾಜ್, ವಿರೂಪಾಕ್ಷ , ಹರೀಶ್ ರವರು ಮಾದಕ ವ್ಯಸನಗಳು, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ,ಮಕ್ಕಳ ಸುರಕ್ಷತೆ ,ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ, ಮುಂತಾದ ಮಾಹಿತಿಗಳನ್ನು ನೀಡಿದರು.
ವೇದಿಕೆಯಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷೆ ಸುಜಾತ, ಶಾಲಾ ಮುಖ್ಯ ಗುರು ಫೇಲ್ಸಿಟಾ ಡಿ ಕುನ್ಹಾ ಉಪಸ್ಥಿತರಿದ್ದರು. ಮುಖ್ಯ ಗುರು ಸ್ವಾಗತಿಸಿ, ಶಿಕ್ಷಕಿ ವಿಶಾಲಾಕ್ಷಿ ವಂದಿಸಿದರು. ಶಿಕ್ಷಕಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸೌಮ್ಯ ಸುನಿಲ್ ಹಾಗೂ ನೀತಾ ಸಹಕರಿಸಿದರು.