ಪುತ್ತೂರು: ಒಡಿಯೂರು ಶ್ರೀಗಳ 64 ನೇ ಜನ್ಮ ದಿನೋತ್ಸವದ ಪ್ರಯುಕ್ತ ಒಡಿಯೂರು ವಿಕಾಸ ವಾಹಿನಿ, ಸ್ವಸಹಾಯ ಸಂಘ ಸದಸ್ಯರಿಂದ ಕೆಯ್ಯೂರು ಶ್ರೀ ಮಹಿಮಷರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಆ.3 ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ವಲಯ ಸಂಯೋಜಕಿ ಶಶಿ ಡಿ, ಕೆದಂಬಾಡಿ ಘಟ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು, ಕೆಯ್ಯೂರು ಸೇವಾ ದೀಕ್ಷಿತೆ ಗೀತಾ ಹರಿಪ್ರಸಾದ್, ಕೆದಂಬಾಡಿ ಸೇವಾ ದೀಕ್ಷಿತೆ ಕಾವ್ಯ, ಕೆಯ್ಯೂರು ಘಟ ಸಮಿತಿ ಅಧ್ಯಕ್ಷ ದೇವರಾಜ್, ಸಂಘಟನಾ ಕಾರ್ಯದರ್ಶಿ ಕಮಲ, ಕಾರ್ಯದರ್ಶಿ ಶ್ವೇತಾ, ನಯನ, ಕೆದಂಬಾಡಿ ಸಂಘಟನಾ ಕಾರ್ಯದರ್ಶಿ ರವೀಂದ್ರ ನಂಜೆ ಹಾಗೂ ದೇವಾಲಯದ ಸಿಬ್ಬಂದಿ ಚಂದ್ರಶೇಖರ ರೈ ಕಜೆ,ಆನಂದ , ಕುಂಞ ಮತ್ತಿತರರು ಉಪಸ್ಥಿತರಿದ್ದರು.