ಪುತ್ತೂರು: ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಅ.೮ರಂದು ರಾತ್ರಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅರ್ಚಕ ವೆ.ಮೂ. ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ನಡೆಯಿತು.

ಸಂಜೆ ಕಲಶ ಪ್ರತಿಷ್ಠೆ, ಲಲಿತಾ ಸಹಸ್ರನಾಮ ಪಠಣ, ಕ್ಷೇತ್ರದ ದುರ್ಗಾಪರಮೇಶ್ವರೀ ಭಜನಾ ಮಂಡಳಿ ವತಿಯಿಂದ ಭಜನೆ, ವೇಣುಗೋಪಾಲ್ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆದು ರಾತ್ರಿ ವರಮಹಾಲಕ್ಷ್ಮೀಪೂಜೆಯ ಮಂಗಳಾರತಿ, ಶ್ರೀ ದುರ್ಗಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಫಲಾಹಾರ ನಡೆಯಿತು.
ಅರ್ಚಕರಾದ ಮನಮೋಹನ ಭಟ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್, ಉಪಾಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಕಾರ್ಯದರ್ಶಿ ಪ್ರಸನ್ನ ಬಳ್ಳಾಲ್, ಕೋಶಾಧಿಕಾರಿ ಜಲಜಾಕ್ಷಿ ಹೆಗ್ಡೆ, ಸಹ ಕೋಶಾಧಿಕಾರಿ ಪುಷ್ಪಲತಾ ಬಿ ಪೂಜಾರಿ, ಜತೆ ಕಾರ್ಯದರ್ಶಿ ಸುಂದರ ನಾಯ್ಕ, ಜಯಕಿರಣ್ ಉರ್ಲಾಂಡಿ, ಸದಸ್ಯರುಗಳಾದ ಸಂತೋಷ್ಕುಮಾರ್ ಬೊಳುವಾರು, ಕಿರಣ ಶಂಕರ ಮಲ್ಯ, ವಿಶ್ವಸ್ಥ ಮಂಡಳಿ ಟ್ರಸ್ಟಿ ಶೋಭಾ ಭಾಸ್ಕರ ಹೆಗ್ಡೆ, ಧನಂಜಯ ರೈ, ಮನೋಹರ್ ರೈ, ವಿ.ಕೆ. ಶೆಟ್ಟಿ, ವರದರಾಜ ಪ್ರಭು, ಸುಜೀಂದ್ರ ಪ್ರಭು ಸ್ಥಳೀಯರಾದ ಪುಟ್ಟಣ್ಣ ನಾಯ್ಕ, ದಿನೇಶ್ ಕರ್ಮಲ, ಕಿರಣ್ ಉರ್ಲಾಂಡಿ, ಹರ್ಷಿತ್ ಎ.ಎನ್., ರೋಹಿತ್ ಬೊಳುವಾರು, ಅನಂತಕೃಷ್ಣ ಭಟ್, ಬೇಬಿ ಪೂಜಾರಿ, ಪುಷ್ಪರಾಜ್ ಹೆಗ್ಡೆ, ಮನ್ವಿತ್, ಪ್ರಥಮ ರೈ, ಶಕುಂತಳಾ ವಿ.ಕೆ. ಶೆಟ್ಟಿ, ಸುಧಾ ಎಂ. ರೈ, ನಂದನ ಡಿ. ರೈ ನುಳಿಯಾಲು, ಕವಿತಾ ಬೊಳುವಾರು, ಗೀತಾ, ಜಯಂತಿ, ಲಲಿತಾ, ಉಷಾ, ಕ್ಷೇತ್ರ ಯುವಕ ವೃಂದದ ಸದಸ್ಯರು, ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ ಸದಸ್ಯರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.