ಶಿಕ್ಷಕ ವೃತಿಯ ಗೌರವ ಅವಿಸ್ಮರಣೀಯ : ಮಹಮ್ಮದ್ ಬಡಗನ್ನೂರು
ಬಡಗನ್ನೂರು: ಸ. ಉ. ಹಿ. ಪ್ರಾ. ಶಾಲೆ ಬಡಗನ್ನೂರು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಎಸ್. ಡಿ. ಯಂ. ಸಿ ಇದರ ವತಿಯಿಂದ ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ರವರಿಗೆ ಬೀಳ್ಕೊಡುಗೆ ಸಮಾರಂಭ. ಆ.9 ರಂದು ಬಡಗನ್ನೂರು ಶಾಲಾ ಅಭಿಮಾನ್ ಸಭಾಂಗಣದಲ್ಲಿ ನಡೆಯಿತು.
ಶಾಲಾ ಹಿರಿಯ ವಿದ್ಯಾರ್ಥಿ ಮತ್ತು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಮಾತನಾಡಿ, ಸರಕಾರಿ ಸೇವೆ ಆಕಸ್ಮಿಕ ಮತ್ತು ಒಂದು ಯೋಗ. ಸರ್ಕಾರಿ ಉದ್ಯೋಗದಲ್ಲಿ ಶಿಕ್ಷಕ ವೃತ್ತಿಗೆ ಇರುವಷ್ಟು ಗೌರವ ಬೇರೆ ಯಾವ ಅಧಿಕಾರಿಗಳಿಗೂ ಸಿಗುತ್ತಿಲ್ಲ, ಶಿಕ್ಷಣ ವೃತ್ತಿಗೆ ಅತ್ಯಂತ ಗೌರವಸ್ಥಾನವಿದೆ. ಸರಕಾರಿ ವೃತ್ತಿಯಲ್ಲಿ ನಿವೃತ್ತಿ ಸರ್ವೆಸಾಮಾನ್ಯ. ಆ ನಡುವಿನ ಸಮಯದಲ್ಲಿ ಮಾಡಿದ ಉತ್ತಮ ಸಾಧನೆ ಜೀವನ ಪರ್ಯಂತ ಅವಿಸ್ಮರಣೀಯವಾಗಿ ಉಳಿಯುತ್ತದೆ. ಶಿಕ್ಷಕಿ ಹರೀಣಾಕ್ಷಿ ರವರು ತಾಯಿ ಸ್ವರೂಪಿ, ಕರುಣಾಮಯಿ, ಮಕ್ಕಳೊಂದಿಗೆ ಮಕ್ಕಳಾಗಿ ನಡೆದುಕೊಂಡು ಶಾಲೆಯ ಎಲ್ಲರೊಂದಿಗೆ ಪ್ರೀತಿ ಪಾತ್ರರಾಗಿದ್ದುಕೊಂಡು ಸಂಸ್ಥೆಯ ಪ್ರಗತಿಗೆ ಕಾರಣರಾಗಿದ್ದಾರೆ. ಇವರ ಮುಂದಿನ ನಿವೃತ್ತಿ ಜೀವನ ಉಜ್ವಲವಾಗಿರಲಿ ಎಂದರು.

ಬಹುಮುಖ ಪ್ರತಿಭೆಯುಳ್ಳ ಶಿಕ್ಷಕಿ -ಜಯಂತ ರೖೆ ಕುದ್ಕಾಡಿ
ಪ್ರಗತಿಪರ ಕೃಷಿಕ, ಶಿಕ್ಷಣಾಭಿಮಾನಿ ಜಯಂತ ರೖೆ ಕುದ್ಕಾಡಿ ಮಾತನಾಡಿ, ಶಿಕ್ಷಕಿ ಹರೀಣಾಕ್ಷಿ ಕಳೆದ 15 ವರ್ಷ ಉತ್ತಮ ಕೆಲಸ ಮಾಡಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರಿಗೆ ಭಜನೆ, ನಾಟ್ಯ, ಪದ್ಯ ಇನ್ನೀತರ ಚಟುವಟಿಕೆಗಳಲ್ಲಿ ಬಹುಮುಖ ಪ್ರತಿಭೆಯನ್ನು ಹೊಂದಿರುವುದರಿಂದ ಮಕ್ಕಳು ತುಂಬಾ ಹಚ್ಚಿಕೊಂಡಿದ್ದರು. ಮತ್ತು ಆವರು ಕೂಡ ಮಕ್ಕಳೊಂದಿಗೆ ಮಕ್ಕಳಾಗಿದ್ದರು. ಕಳೆದ 20 ವರುಷಗಳಿಂದ ಮುಖ್ಯ ಶಿಕ್ಷಕರ ಜವಾಬ್ದಾರಿ ಹೊತ್ತು ಇಂದು ವೃತ್ತಿ ಜೀವನದಿಂದ ನಿವೃತ್ತರಾಗುತ್ತಿರುವ ಇವರ ಮುಂದಿನ ಜೀವನ ಸುಖ, ಶಾಂತಿ, ನೆಮ್ಮದಿ ಯಾಗಿರಲಿ ಎಂದರು.
ಸಾಧನೆ ಅಮೋಘ -ನಾರಾಯಣ ನಾಯ್ಕ
ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಮಾತನಾಡಿ, ನಾನು ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲೂ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೆವು. ಯಾವುದೆ ಕೆಲಸ ಆಗಬೇಕಾದರೆ, ಯಾರನ್ನಾದ್ರೂ ಹಿಡಿದು ಮಾತನಾಡಿ ಮಾಡಿಸುವ ಒಂದು ಚಾತುರ್ಯತೆ ಅವರಲ್ಲಿ ಇತ್ತು ಉತ್ತಮ ಸಾಧಕಿ. ಎಲ್ಲರೂಂದಿಗೆ ಒಡನಾಟ ಉತ್ತಮವಾಗಿತ್ತು. ಇದರಿಂದ ಇಷ್ಟು ಜನರ ಪ್ರೀತಿ ಸಂಪಾದನೆಗೆ ಸಾಧ್ಯವಾಗಿದೆ ಎಂದರು.
ಉತ್ತಮ ಸೇವೆ ಸಲ್ಲಿಸಿ ಸಾರ್ಥಕತೆ ಜೀವನ -ರಾಮಣ್ಣ ಗೌಡ
ಸುಳ್ಯಪದವು ಬಾಲಸುಬ್ರಮಣ್ಯ ಅನುದಾನಿತ ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ ಗೌಡ ಬಸಹಿತ್ತಿಲು ಮಾತನಾಡಿ, ಮನೆಯ ವಾತಾವರಣ ಉತ್ತಮವಿದ್ದರೆ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಶಿಕ್ಷಕಿ ಹರೀಣಾಕ್ಷಿ ರವರು ಕೂಡು ಕುಟುಂಬ ಹೊಂದಿದವರು ಶಿಕ್ಷಕರಾಗಿ ಅವರ ಕರ್ತವ್ಯವನ್ನು ನಿಭಾಯಿಸಿಕೊಂಡು ಸಾರ್ಥಕ ಜೀವನ ಸಾದಿಸಿದ್ದಾರೆ. ಊರಿನವರ ಸಹಕಾರ,ಮತ್ತು ಬೇಕಾದಷ್ಟು ಅಧ್ಯಾಪಕರು ಇದ್ದರೆ ಸರಕಾರಿ ಶಾಲೆ ಉಳಿಸಿ ಬೆಳೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಹರೀಣಾಕ್ಷಿ ರವರು ಶಾಲಾ ಪ್ರಗತಿಗೆ ಶ್ರಮಿಸಿದ್ದಾರೆ ಎಂದರು.

ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು- ಶಂಕರಿ ಪಟ್ಟೆ
ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ ಮಾತನಾಡಿ, ಇಂದು ಬೀಳ್ಕೊಡುಗೆ ಹೊಂದುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ರವರು ಸೌಮ್ಯ ಸ್ವಭಾವದ ವ್ಯಕ್ತಿತ್ವ ಯುಳ್ಳವರಾಗಿದ್ದರು ಮತ್ತು ವೖೆಯಕ್ತಿಕ ಜೀವನದಲ್ಲಿ ಚಲ ಹೊಂದಿದ್ದಾರೆ. ಪೋಷಕರೊಂದಿಗೆ, ಶಿಕ್ಷಕ ವೃಂದದವರೊಂದಿಗೆ ಮತ್ತು ಮಕ್ಕಳಲ್ಲಿ ಪ್ರೀತಿಯಿಂದ ಮಾತನಾಡುತ್ತಾ ಎಲ್ಲರೊಂದಿಗೆ ಪ್ರೀತಿ ಪಾತ್ರರಾಗಿದ್ದರು ಎಂದರು.
ಶಿಕ್ಷಕ ವೃತ್ತಿಯಲ್ಲಿ ಮಾತ್ರ ಇಷ್ಟೊಂದು ಜನರ ಪ್ರೀತಿ ಸಂಪಾದನೆ ಮಾಡಲು ಸಾಧ್ಯವಾಗಿದೆ-ಹರೀಣಾಕ್ಷಿ ಎ
ಸೇವಾ ನಿವೃತ್ತಿಗೊಂಡ ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ರವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಅರಳುತ್ತಿರವ ಮಕ್ಕಳೊಂದಿಗೆ ವ್ಯವಹಾರ ಮಾಡುತ್ತಿರುವುದರಿಂದ ಇಷ್ಟು ಪ್ರೀತಿ ಸಂಪಾದನೆ ಮಾಡಲು ಸಾಧ್ಯವಾಗಿದೆ. ಶಿಕ್ಷಕ ವೃತ್ತಿಯಲ್ಲಿ ಮಾತ್ರ ಇಷ್ಟೊಂದು ಜನರ ಪ್ರೀತಿ ಸಂಪಾದನೆ ಮಾಡಲು ಸಾಧ್ಯವಾಗಿದೆ. ಶಿಕ್ಷಕರಾದರೂ ನಾವು ಶಾಲೆಯಲ್ಲಿ ಅಕ್ಕ-ತಮ್ಮಂದಿರ ಹಾಗೆ ಇದ್ದೆವು. ನನ್ನ ಸೇವಾ ನಿವೃತ್ತಿ ಅವಧಿ ಮುಗಿಯುವ ಮುನ್ನ ಶಾಲೆಗೆ ಒಂದು ಸಭಾಂಗಣ, ಮತ್ತು ಸುವ್ಯವಸ್ಥಿತ ಶೌಚಾಲಯ ನಿರ್ಮಾಣ ಆಗಬೇಕು ಎಂಬ ಕನಸು ಇತ್ತು. ಅದು ಊರಿನ ದಾನಿಗಳ ಸಹಕಾರದಲ್ಲಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃಧ್ಧಿ ಸಮಿತಿ ಮುತುವರ್ಜಿಯಲ್ಲಿ ನಿರ್ಮಾಣಗೊಂಡು ಅದೇ ಸಭಾಂಗಣದಲ್ಲಿ ಇಂದು ನನಗೆ ಬೀಳ್ಕೊಡುಗೆ ಸಮಾರಂಭ ನಡೆಯುತ್ತಿರುವುದು ಸಂತಸ ತಂದಿದೆ. ಜೊತೆಗೆ ಗ್ರಾ. ಪಂ ವತಿಯಿಂದ ನರೇಗಾ ಯೋಜನೆಯಡಿ ಶೌಚಾಲಯ ರಚನೆಗೊಂಡು ಕಾಮಗಾರಿ ಪೂರ್ಣಗೊಂಡು ಅ.15ರಂದು ಉದ್ಘಾಟನೆ ನಡೆಯಲಿದ್ದು, ಎರಡು ಕನಸು ನನಸಾಗಿದೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೖೆ ಕುದ್ಕಾಡಿ ಮಾತನಾಡಿ, ಕಳೆದ 15 ವರ್ಷಗಳಿಂದ ಶಾಲೆಯಲ್ಲಿ ನದಾ ನಗುಮುಖದಲ್ಲಿ ಎಲ್ಲರ ಸಹಕಾರ ಪಡೆದುಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲರ ಪ್ರೀತಿಯ ಶಿಕ್ಷಕಿಯಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ ನೇತೃತ್ವದಲ್ಲಿ ದಾನಿಗಳ ಸಹಕಾರದಲ್ಲಿ ಉತ್ತಮ ಸಭಾಂಗಣ ರಚನೆ ಮಾಡುವ ಮೂಲಕ ಅವರ ಕನಸು ನನಸಾಗಿ ಮಾಡಲಾಗಿದೆ. ಅವರ ಮುಂದಿನ ಜೀವನ ಸುಖ ಶಾಂತಿಯಿಂದ ಬೆಳಗಲಿ ಎಂದು ಶುಭ ಹಾರೖೆಸಿದರು.
ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ದಾರ ಬ್ರಹ್ಹಕಲಶೋತ್ಸವ ಸಮಿತಿ ಅಧ್ಯಕ್ಷ, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರ ಶ್ರೀನಿವಾಸ್ ಭಟ್ ಚಂದುಕೂಡ್ಲು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಮುಖ್ಯ ಶಿಕ್ಷಕಿ ಜವಾಬ್ದಾರಿ ಹೊತ್ತುಕೊಂಡು ಕಳೆದ 15 ವರ್ಷಗಳಿಂದ ಉತ್ತಮ ಸೇವೆ ನಿರ್ವಹಿಸಿದ್ದಾರೆ. ಇವರು ಸಾವಿರಾರು ಮಕ್ಕಳಿಗೆ ವಿದ್ಯಾರ್ಜನೆ ಧಾರೆ ಎರೆದಿದ್ದಾರೆ. ಮಾತ್ರವಲ್ಲದೆ ಶಿಸ್ತಿನ ಸಿಪಾಯಿಯಾಗಿ ಮಕ್ಕಳಿಗೆ ಉತ್ತಮ ರೀತಿಯ ಶಿಸ್ತು ನೀಡಿ ಬೆಳೆಸಿದ್ದಾರೆ ಎಂದರು.

ಪ್ರಗತಿಪರ ಕೃಷಿಕ ಕೃಷ್ಣ ರೖೆ ಕುದ್ಕಾಡಿ, ಇರ್ದೆ ಸರಕಾರಿ ಶಾಲಾ ಶಿಕ್ಷಕಿ ಜಯಲತಾ, ಹಾರಡಿ ಶಾಲಾ ಶಿಕ್ಷಕ ಜನಾರ್ದನ ಡಿ ಪುತ್ರಿಯರಾದ ಲಹರಿ, ಹಾಗೂ ಲಕ್ಷೀತಾ ಸಂದಭೋಚಿತ ಮಾತನಾಡಿ ಶುಭ ಹಾರೖೆಸಿದರು.
ವೇದಿಕೆಯಲ್ಲಿ ಬಡಗನ್ನೂರು ಗ್ರಾ. ಪಂ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯೆ ಸುಜಾತ ಮೖೆಂದನಡ್ಕ, ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷ ಗಿರೀಶ್ ಗೌಡ ಕನ್ನಯ, ಲಂಬೋಧರ ರೖೆ ಬಜ್ಜ ಸುಮನ್ ಶೆಟ್ಟಿ ಬೆಂಗಳೂರು ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ತ್ಯಾಂಪಣ್ಣ ಸಿ. ಯಚ್, ಬಾಬು ಮೂಲ್ಯ ಮೖೆಂದನಡ್ಕ, ಮಹಾಲಿಂಗ ಪಾಟಾಳಿ, ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಹಾಲಿ ಉಪಾಧ್ಯಕ್ಷೆ ಸುಲೋಚನಾ ನೇರ್ಲಂಪ್ಪಾಡಿ, ಮಾಜಿ ಸದಸ್ಯರಾದ ಲತಾ ಕಟ್ಟಾವು, ಸೌಮ್ಯ ಶ್ರೀಕೃಷ್ಣ ಗೌಡ ಮೖೆಂದನಡ್ಕ, ಸಾವಿತ್ರಿ , ದಾಮೋಧರ ಕಾವ್ಯ ಪೖೆರುಪುಣಿ, ದಾಮೋದರ ಪೖೆರುಪುಣಿ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಚೖೆತ್ರ ಸನ್ಮಾನ ಪತ್ರ ವಾಚಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೖೆ ಪಲ್ಲತ್ತಾರು ವಂದಿಸಿದರು. ಗೌರವ ಶಿಕ್ಷಕಿ ಮಧುಶ್ರೀ ಜ್ಞಾನ ದೀಪ ಶಿಕ್ಷಕಿ ಸೌಮ್ಯ ಸಹಕರಿಸಿದರು.

ಅಭಿನಂದನೆ:-
ಶಿಕ್ಷಕ ವೃತ್ತಿಯಲ್ಲಿ ಸುಮಾರು 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಮತ್ತು ಲಂಭೋದರ ರೖೆ ದಂಪತಿಗಳನ್ನು ಹಾಗೂ ಅವರ ಮಾತೃಶ್ರೀ ಲಕ್ಷ್ಮೀ ಅವರನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ಸಹೋದ್ಯೋಗಿ ಶಿಕ್ಷಕರಾದ ಶಾಲಾ ನಿವೃತ್ತ ಶಿಕ್ಷಕ ಶೀಧರ ಬೋಳುಲಾಯ, ಪೇರಲ್ತಡ್ಕ ಶಾಲಾ ಶಿಕ್ಷಕಿ ಗೀತಾ ಲೋಬೋ,ಇರ್ದೆ ಸರಕಾರಿ ಶಾಲಾ ಶಿಕ್ಷಕಿ ಜಯಲತಾ, ಹಾರಾಡಿ ಶಾಲಾ ಶಿಕ್ಷಕ ಜನಾರ್ದನ ಡಿ ಸಾಲು, ಸ್ಮರಣಿಕೆ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸಜಂಕಾಡಿ ಶಾಲಾ ಶಿಕ್ಷಕರಾದ ಸುಮಲತಾ , ಗಣೇಶ್ ನಾಯಕ್, ಕೖೊಲ ಬಡಗನ್ನೂರು ಶಾಲಾ ಶಿಕ್ಷಕ ಗಿರೀಶ್ ಡಿ, ಗೌರವ ಶಿಕ್ಷಕಿ ಸರಳಾ ಡಿ ಹಾಗೂ ಬಡಗನ್ನೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಮಕ್ಕಳ ಪೋಷಕರು, ವಿದ್ಯಾಭಿಮಾನಿಗಳು ಮತ್ತು ಮಕ್ಕಳು ಹಾಗೂ ಊರಿನವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಡಗನ್ನೂರು ಶಾಲೆಯಲ್ಲಿ ಸಮಾರು ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಇದೀಗ ದರ್ಬೆತ್ತಡ್ಕ ಶಾಲೆಗೆ ವರ್ಗಾವಣೆಗೊಂಡ ಸಹ ಶಿಕ್ಷಕಿ ರಮ್ಯಾ ಹಾಗು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿಸ್ಮಿತಾ ಎಂ ಅವರನ್ನು ಗೌರವಿಸಿದರು.