





ಕಡಬ: ಇಲ್ಲಿನ ಐಐಸಿಟಿ ವಿದ್ಯಾಸಂಸ್ಥೆಯ ಮೊಂಟೇಸರಿ ವಿಭಾಗದ ವಿದ್ಯಾರ್ಥಿಗಳಿಂದ ರೆಡ್ ಡೇ ಕಾರ್ಯಕ್ರಮ ಆಚರಿಸಲಾಯಿತು.


ಅಧ್ಯಕ್ಷತೆ ವಹಿಸಿದ್ದ ಮೇರಿ ಟೀಜಲ್ ಅವರು ರೆಡ್ ಡೇ ಆಚರಣೆಯ ಮಹತ್ವ ತಿಳಿಸಿದರು. ಅತಿಥಿಯಾಗಿದ್ದ ಪ್ರಿನ್ಸಿ ಅವರು ಕೆಂಪು ಬಣ್ಣದ ಪ್ರಾತಿನಿಧ್ಯ ಹಾಗೂ ಅದರ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಸ್ಥೆಯ ಮುಖ್ಯಸ್ಥೆ ಅನಿತಾ ಹಾಗೂ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮಿ ಎಸ್.ಶುಭ ಹಾರೈಸಿದರು. ಸಹಶಿಕ್ಷಕಿ ಸುಶ್ಮಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತರಗತಿ ನಾಯಕಿ ಕೌಸರ್ ಬಾನು ಕೆಂಪು ಬಣ್ಣಕ್ಕೆ ಸಂಬಂಧಿಸಿದ ವಿಶೇಷ ಚಟುವಟಿಕೆಯನ್ನು ನಡೆಸಿಕೊಟ್ಟರು.





ವಿದ್ಯಾರ್ಥಿಗಳು ವಿಭಿನ್ನ ರೀತಿಯ ಕಲಾತ್ಮಕ ಪ್ರದರ್ಶನಗಳ ಮೂಲಕ ಕಾರ್ಯಕ್ರಮವನ್ನು ಜೀವಂತಗೊಳಿಸಿದರು. ಜಯಶ್ರೀ, ಪಾರ್ವತಿ, ಶಾಲಿನಿ ಪ್ರಾರ್ಥಿಸಿದರು. ಅಭಿನಯ ಸ್ವಾಗತಿಸಿದರು, ನವ್ಯ ಕಾರ್ಯಕ್ರಮ ನಿರೂಪಿಸಿದರು. ಕುಸುಮ ವಂದಿಸಿದರು.











