ನೆಲ್ಯಾಡಿ: ಇಚ್ಲಂಪಾಡಿ-ನೇರ್ಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪೋಷಕರ ಸಭೆಯಲ್ಲಿ ನೂತನ ಎಸ್ಡಿಎಂಸಿ ರಚನೆ ಮಾಡಲಾಯಿತು.
ಎಸ್ಡಿಎಂಸಿ ಅಧ್ಯಕ್ಷರಾಗಿ ವಸಂತ ಬಿಜೇರು ಹಾಗೂ ಉಪಾಧ್ಯಕ್ಷರಾಗಿ ನಂದಾ ಪಾದೆ ಪುನರಾಯ್ಕೆಯಾದರು. ಸದಸ್ಯರಾಗಿ ವಾಣಿ ಬಿಜೇರು, ಸೌಮ್ಯ, ಮಮತಾ, ಶಾಲಿನಿ, ಚಂದ್ರಾವತಿ, ಬೇಬಿ, ಅಕ್ಷತಾ, ಶಶಿಕಲಾ, ಸಿನಿ, ವಿಜಯ, ಪ್ರಮೀಳಾ, ನಿತ್ಯಾನಂದ, ಸೂರಪ್ಪ, ಸತೀಶ್ ಪಳಿಕೆ, ದಾಮೋದರ ಗೌಡ, ಜಲಜಾಕ್ಷ ಆಚಾರ್ಯ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕ ಡಾ.ಗಿರೀಶ್ ಸ್ವಾಗತಿಸಿ, ಮಾಹಿತಿ ನೀಡಿದರು.
