ಶಾರದಾ ಭಜನಾ ಮಂದಿರದ ಈಗಿನ ಅಧ್ಯಕ್ಷರನ್ನು ವಜಾಗೊಳಿಸುವಂತೆ ವಿಶ್ವಕರ್ಮ ಯುವ ಮಿಲನ್ ಆಗ್ರಹ

0

ಪುತ್ತೂರು: ಪುತ್ತೂರು ಶಾರದಾ ಭಜನಾ ಮಂದಿರದ ಅಧ್ಯಕ್ಷ ಸ್ಥಾನದಲ್ಲಿರುವ ಪಿ.ಜಿ.ಜಗನ್ನಿವಾಸ ರಾವ್ ಅವರನ್ನು ಅಧ್ಯಕ್ಷ ನೆಲೆಯಿಂದ ವಜಾಗೊಳಿಸುವಂತೆ ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯದ ಪುತ್ತೂರು ತಾಲೂಕು ಘಟಕದಿಂದ ಆಗ್ರಹ ವ್ಯಕ್ತವಾಗಿದೆ.


ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯ ಇದರ ಸ್ಥಾಪಕ ರಾಜ್ಯಾಧ್ಯಕ್ಷ ವಿಕ್ರಂ ಆಚಾರ್ಯ ಮಂಗಳೂರು ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಾತೃ ಸ್ವರೂಪಿಣಿಯಾದ ಶಾರದಾ ಮಾತೆಯನ್ನು ಪೂಜಿಸುವ ಈ ಆರಾಧನಾಲಯದಲ್ಲಿ ಇಷ್ಟು ವರ್ಷ ಯಾವುದೇ ಕಳಂಕ ರಹಿತವಾದ ಗಣ್ಯರು ಶಾರದಾ ಭಜನಾ ಮಂದಿರದ ಆಡಳಿತ ಮಂಡಳಿಯನ್ನು ನಡೆಸುತ್ತಿದ್ದರು, ಪ್ರಸ್ತುತ ಅಧ್ಯಕ್ಷರಾಗಿರುವ ಪಿ.ಜಿ.ಜಗನ್ನಿವಾಸ ರಾವ್ ಅವರ ಮಗ ಪಿ.ಜಿ. ಕೃಷ್ಣ ಜೆ. ರಾವ್ ಅವರಿಂದ ನಮ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯವಾಗಿದ್ದು, ಮುಗ್ಧ ಹೆಣ್ಣು ಮಗಳಿಗೆ ನ್ಯಾಯ ಒದಗಿಸುವಂತೆ ಬೇರೆ ಬೇರೆ ಮೂಲಗಳಿಂದ ಹಾಗೂ ವೈಯಕ್ತಿಕವಾಗಿ ಮನವಿ ಮಾಡಲಾಗಿದೆ. ಆದರೆ ಮನವಿಗೆ ಅವರು ಸ್ಪಂದನೆ ನೀಡಲಿಲ್ಲ. ಅಲ್ಲದೆ ನಮ್ಮ ಹಿರಿಯರಾದ ಅಮೈ ಮಂಜುನಾಥ ಆಚಾರ್ಯ, ಮಹಾಲಿಂಗ ಆಚಾರ್ಯ, ಗೋಪಾಲ ಆಚಾರ್ಯ, ಕೃಷ್ಣಪ್ಪ ಆಚಾರ್ಯ ಅವರು ಶಾರದಾ ಮಂದಿರದ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು. ಪ್ರಸ್ತುತ ಯಶವಂತ ಆಚಾರ್ಯ ಉಪಾಧ್ಯಕ್ಷರಾಗಿದ್ದು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಮಂದಿರದ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ವಿಶ್ವಕರ್ಮ ಸಮುದಾಯದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದು, ಪ್ರಸ್ತುತ ಪಿ.ಜಿ. ಜಗನ್ನಿವಾಸ ರಾವ್ ಅವರ ಮುಂದಾಳತ್ವದಲ್ಲಿ ನಡೆಯುವ ಮಂದಿರದ ಯಾವುದೇ ಕಾರ್ಯಕ್ರಮಗಳಿಗೆ ನಮ್ಮ ಸಮಾಜದ ಬೆಂಬಲವಿರುವುದಿಲ್ಲ. ಆದರಿಂದ ತಕ್ಷಣ ಪಿ.ಜಿ.ಜಗನ್ನಿವಾಸ ರಾವ್ ಅವರನ್ನು ಅಧ್ಯಕ್ಷ ನೆಲೆಯಿಂದ ವಜಾಗೊಳಿಸುವಂತೆ ತಿಳಿಸಿದ ಅವರು ಮುಂದೆ ಮಂದಿರದ ಆಡಳಿತ ಮಂಡಳಿಗೂ ಮನವಿ ಮಾಡಲಿದ್ದೇವೆ. ಅನ್ಯಾಯಕೊಳಗಾದ ನಮ್ಮ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ಸಿಗುವವರೆಗೆ ಆರೋಪಿ ಪಿ.ಜಿ ಕೃಷ್ಣಾ ಜೆ. ರಾವ್ ಅವರ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರನ್ನು ಯಾವುದೇ ಧಾರ್ಮಿಕ ಕ್ಷೇತ್ರ, ಕಾರ್ಯಕ್ರಮಗಳಿಗೆ ಸೇರಿಸುವುದನ್ನು ನಮ್ಮ ವಿಶ್ವಕರ್ಮ ಸಮುದಾಯದ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಆಚಾರ್ಯ, ತಾಲೂಕು ಅಧ್ಯಕ್ಷ ಹರೀಶ್ ಆಚಾರ್ಯ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಪಾಲ್ತಾಡಿ, ಕೋಶಾಧಿಕಾರಿ ಜಗದೀಶ ಆಚಾರ್ಯ, ಉಪಾಧ್ಯಕ್ಷ ರವಿ ಆಚಾರ್ಯ ಉಪಸ್ಥಿತರಿದ್ದರು. ಪತ್ರಿಕಾಗೋಷ್ಟಿಯ ಬಳಿಕ ಭಜನಾ ಮಂದಿರದ ಕಾರ್ಯದರ್ಶಿ ಜಯಂತ್ ಉರ್ಲಾಂಡಿಯವರಿಗೆ ವಿಶ್ವಕರ್ಮ ಯುವ ಮಿಲನದ ನಿಯೋಗದೊಂದಿಗೆ ಮನವಿ ಮಾಡಲಾಯಿತು.

LEAVE A REPLY

Please enter your comment!
Please enter your name here