





ಪುತ್ತೂರು: ಕರ್ನಾಟಕ ಯಕ್ಷಗಾನ ನಾಟಕ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ಕೀರ್ತಿಶೇಷ ಡಾ| ಶ್ರೀಧರ ಭಂಡಾರಿ ಸಂಸ್ಮರಣಾ ವೇದಿಕೆ ಹಾಗೂ ಪುತ್ತೂರು ಶ್ರೀಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದಿ| ಡಾ| ಶ್ರೀಧರ ಭಂಡಾರಿರವರ ಸಂಸ್ಮರಣೆ, ಯಕ್ಷಗಾನ ಕಲಾವಿದ ಸೂರಿಕುಮೇರು ಕೆ.ಗೋವಿಂದ ಭಟ್ಟರವರಿಗೆ ಸನ್ಮಾನ ಹಾಗೂ ಕಾರ್ತಿಕೇಯ ಕಲ್ಯಾಣ ಯಕ್ಷಗಾನ ಕಾರ್ಯಕ್ರಮ ಆ.13ರಂದು ಸಂಜೆ 6ರಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ರಾತ್ರಿ 8ರಿಂದ ಸಭಾಕಾರ್ಯಕ್ರಮ ನಡೆಯಲಿದೆ ಎಂದು ಉಷಾಶ್ರೀಧರ ಭಂಡಾರಿ ಹಾಗೂ ಮನೆಯವರು ತಿಳಿಸಿದ್ದಾರೆ.












