ಪುತ್ತೂರು: ಜಗತ್ತಿನೆಲ್ಲೆಡೆ ಇರುವ ಪುತ್ತೂರಿನವರು ಓದುವ ತಾಲೂಕಿ ನಂ.1 ಕನ್ನಡ ದಿನ ಪತ್ರಿಕೆ ಸುದ್ದಿ ಬಿಡುಗಡೆಯಿಂದ ಕಡಬ ತಾಲೂಕಿನ ಸಮಗ್ರ ಅಭಿವೃದ್ದಿಯ ಕುರಿತಾದ ವೈಶಿಷ್ಟ್ಯಪೂರ್ಣ ಲೇಖನಗಳಿರುವ ವಿಶೇಷ ಸಂಚಿಕೆ ಆ.13ರಂದು ಪುತ್ತೂರು ಪ್ರಧಾನ ಕಚೇರಿಯಲ್ಲಿ ಬಿಡುಗಡೆಗೊಂಡಿತು.
ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ವಿಶೇಷ ಪುರವಣಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಸ್ಥೆಯ ಸಿ.ಇ.ಓ ಸೃಜನ್ ಊರುಬೈಲು, ಪುರವಣಿ ನಿರ್ವಹಣೆ ಮಾಡಿದ ಹಮೀದ್ ಪುತ್ತೂರು, ಉಮೇಶ್ ಮಿತ್ತಡ್ಕ, ಯುಸೂಪ್ ರೆಂಜಲಾಡಿ, ಸಂಚಿಕೆಯ ತಾಂತ್ರಿಕ ವಿಭಾಗದ ಜವಾಬ್ದಾರಿ ನಿರ್ವಹಿಸಿದ ಚಂದ್ರಕಾಂತ್ ಉರ್ಲಾಂಡಿ, ಪತ್ರಿಕೆ ವಿತರಣೆ ಮುಖ್ಯಸ್ತ ಪ್ರಜ್ವಲ್, ಜಾಹಿರಾತು ವಿಭಾಗದವರು, ವರದಿಗಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.