ಪುತ್ತೂರು: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿ ಶುಭಾಶಯ ತಿಳಿಸಿದರು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹರೀಶ್ ಗುಮ್ಮಟೆಗದ್ದೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ., ನಿರ್ದೇಶಕರಾದ ರಂಗನಾಥ ರೈ ಗುತ್ತು, ಜಗನ್ನಾಥ ರೈ ಬಾಲ್ಯೊಟ್ಟು, ಶಂಭು ಭಟ್ ಡಿ., ಪುತ್ತೂರು ಪಿ.ಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಮಹಾಲಿಂಗ ನಾಯ್ಕ, ಸಂಘದ ಸಿಬಂದಿಗಳಾದ ಲಿಂಗಪ್ಪ ಗೌಡ ಕಕ್ಕೂರು, ಸುವರ್ಣ ಆರ್.ಬಿ., ರವಿ ಗುಂಡ್ಯಡ್ಕ, ಸ್ವಾತಿ, ಪ್ರಜ್ಞಾ, ಅದ್ದು, ನಿವೃತ್ತ ಸಿಬಂದಿ ಮಹಮ್ಮದ್ ಕುಂಞಿ, ಪ್ರೇರಕಿ ತುಳಸಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.