ಪುತ್ತೂರು: ಪುತ್ತೂರು ನಗರ ಕಾಂಗ್ರೆಸ್ ವ್ಯಾಪ್ತಿಯ ಬನ್ನೂರು ವಲಯದ ವತಿಯಿಂದ 79 ನೇ ಸ್ವಾತಂತ್ರ ದಿನಾಚರಣೆ ಯನ್ನು ಆಚರಿಸಲಾಯಿತು.
ಕಾಂಗ್ರೆಸ್ ಮಹಿಳಾ ನಾಯಕಿ ಶ್ರೀಮತಿ ವಿಲ್ಮಾ ಗೊನ್ಸಾಲ್ವಿಸ್ ರವರ ಮನೆಯ ಬಳಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ . ವಲಯ ಕಾಂಗ್ರೆಸ್ ಅಧ್ಯಕ್ಷ ರೋಷನ್ ರೈ ಬನ್ನೂರು ರವರು ಧ್ವಜಾರೋಹಣ ಗೈದರು. ಮುಖ್ಯ ಆಥಿತಿಗಳಾಗಿ ಭಾಗವಹಿಸಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು.. ಈ ಕಾರ್ಯಕ್ರಮದಲ್ಲಿ ವಲಯ ವ್ಯಾಪ್ತಿಯ ಬೂತ್ ಅಧ್ಯಕ್ಷರುಗಳಾದ ಮಹಾಬಲ ಪೂಜಾರಿ, ರೋಷನ್ ಭಂಡಾರಿ, ಮಾಜಿ ಅಬಕಾರಿ ಇನ್ಸ್ಪೆಕ್ಟರ್ ಅಂಗಾರ,ಸಾಹಿರಭಾನು, ಆಶಿಫ್ ಬನ್ನೂರು, ಸಂತೋಷ್ ಲೋಬೊ, ಪುರಸಭೆಯ ಮಾಜಿ ಅಧ್ಯಕ್ಷ ರಾದ ಶ್ರೀಮತಿ ವಾಣಿಶ್ರೀಧರ್, ನಗರಸಭೆಯ ನಾಮನಿರ್ದೇಶಕ ಸದಸ್ಯೆ ಶ್ರೀಮತಿ ಶಾರದಾ ಅರಸ್ ಸಹಿತ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.