ಪುತ್ತೂರು: ಎಸ್ಡಿಟಿಯು ಆಟೋ ಚಾಲಕರ ಯೂನಿಯನ್ ಪುತ್ತೂರು ಇದರ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ಆ.15ರಂದು ಪುತ್ತೂರು ಬೈಪಾಸ್ ದರ್ಬೆ ದುಗ್ಗಣ್ಣ ದೇರಣ್ಣ ಕಲ್ಯಾಣ ಮಂಟಪ ಬಳಿಯಿಂದ ಆಟೋ ರ್ಯಾಲಿಯು ದರ್ಬೆ ಮೂಲಕ ಕೂರ್ನಡ್ಕ ಕ್ಕೆ ಆಗಮಿಸಿ, ಕೂರ್ನಡ್ಕ ಪೇಟೆ ಜಂಕ್ಷನ್ ನಲ್ಲಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್ಡಿಟಿಯು ಆಟೋ ಚಾಲಕರ ಯುನಿಯನ್ ಇದರ ಪುತ್ತೂರು ಅಧ್ಯಕ್ಷ ಅಸಿಫ್ ಮುಕ್ವೆಯವರು ಅಧ್ಯಕ್ಷತೆ ವಹಿಸಿದ್ದು ಅವರು ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಎಸ್ಡಿಟಿಯು ರಾಜ್ಯ ಸಮಿತಿ ಸದಸ್ಯರಾದ ಹಮೀದ್ ಸಾಲ್ಮರ ಹಾಗೂ ಕೂರ್ನಡ್ಕ ಜುಮ್ಮಾ ಮಸೀದಿ ಕೋಶಾಧಿಕಾರಿ ರಿಯಾಜ್ ಭೂಮಿ ಮತ್ತು ಜಿಲ್ಲಾ ಕಾರ್ಯದರ್ಶಿ ಅದ್ದು ಕೊಡಿ ಪ್ಪಾಡಿ ಉಪಸ್ಥಿತರಿದ್ದರು. ಸುಮಾರು ನೂರಕ್ಕೂ ಮಿಕ್ಕಿ ಆಟೋ ಚಾಲಕರು ರ್ಯಾಲಿಯಲ್ಲಿ ಭಾಗವಹಿದ್ದರು. ಎಸ್ಡಿಟಿಯು ಆಟೋ ಚಾಲಕರ ಯುನಿಯನ್ ಪುತ್ತೂರು ಕೋಶಾಧಿಕಾರಿ ಅಸಿಫ್ ಉಪ್ಪಿನಂಗಡಿ ಸ್ವಾಗತಿಸಿ, ವಂದಿಸಿದರು.