ತಿಂಗಳಾಡಿ: ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಗೌರವಾರ್ಪಣೆ

0

ನಿವ್ವಳ ಲಾಭ: 950721.15 ರೂ, ಡಿವಿಡೆಂಟ್ ಶೇ.6.5 ಘೋಷಣೆ


ಪುತ್ತೂರು:
ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘ ದ ವಾರ್ಷಿಕ ಮಹಾಸಭೆ ಹಾಗೂ ಗೌರವಾರ್ಪಣೆ ಆ. 10 ರಂದು ತಿಂಗಳಾಡಿ ಶ್ರೀಲಕ್ಷ್ಮೀಸಂಕೀರ್ಣದಲ್ಲಿರುವ ಪ್ರಧಾನ ಕಛೇರಿಯ ಆವರಣದಲ್ಲಿ ನಡೆಯಿತು.

ಸಹಕಾರಿಯ ಅಧ್ಯಕ್ಷ ಹರೀಶ ಪುತ್ತೂರಾಯ ಮಾತನಾಡಿ, ಸಹಕಾರಿಯ ಹುಟ್ಟು, ಬೆಳವಣಿಗೆ, ಎದುರಿಸಿದ ಸವಾಲುಗಳ ಬಗ್ಗೆ ವಿವರಿಸಿದರು. ಮುಖ್ಯಕಾರ್ಯನಿರ್ವಾಹಕಿ ಸುಷ್ಮಾ ಭಟ್ ಸಹಕಾರಿಯ 2024-25 ನೇ ಸಾಲಿನ ವರದಿಯನ್ನು ವಾಚಿಸಿದರು. ವರದಿ ವರ್ಷ 2024-25 ಸಾಲಿನಲ್ಲಿ ಒಟ್ಟು ರೂ.12,87,26,967 ವ್ಯವಹಾರ ನಡೆಸಿದ್ದು, ದುಡಿಯುವ ಬಂಡವಾಳ ರೂ. 3,92,94,986.54 ಗಳಾಗಿದ್ದು , ಲೆಕ್ಕ ಪರಿಶೋಧನೆಯಲ್ಲಿ ನಿರಂತರವಾಗಿ 9ನೇ ವರ್ಷ ಎ ತರಗತಿಯನ್ನು ಕಾಯ್ದುಕೊಂಡಿದೆ. ಸಹಕಾರಿಯ ಅಧ್ಯಕ್ಷ ಮಾತನಾಡಿ, ಸಹಕಾರಿಯು ಕಳೆದ 9 ವರ್ಷ ನಡೆದು ಬಂದ ಹಾದಿಯ ಕುರಿತು ವಿವರಿಸಿ, ಸಹಕಾರಿಯ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತ ಸದಸ್ಯ ಭಾಂಧವರು, ನಿರ್ದೇಶಕ ವೃಂದ ಹಾಗೂ ಸಿಬ್ಬಂಧಿ ವರ್ಗದವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು. 2024-25 ನೆ ಸಾಲಿನ ಲೆಕ್ಕಪರಿಶೋಧನೆಯನ್ನು ಮಂಡಿಸಿ, ಸದಸ್ಯರಿಗೆ ಶೇ.6.5 ಡಿವಿಡೆಂಡ್ ಘೋಷಿಸಿದರು. ಸಹಕಾರಿಯು ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ವಿಶ್ವಾಸಾರ್ಹತೆಯನ್ನು ಗಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸುಧಾರಿತ ಸೇವಾ ಸೌಲಭ್ಯಗಳನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.


ಸನ್ಮಾನ-ಗೌರವಾರ್ಪಣೆ
ಸಹಕಾರಿ ಸ್ಥಾಪಕಾಧ್ಯಕ್ಷರು ಹಾಗೂ ಶತಮಾನ ಕಂಡ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನನ್ಯ ಅಚ್ಯುತ ಮೂಡೆತ್ತಾಯರಿಗೆ ಸಹಕಾರಿ ಕ್ಷೇತ್ರದಲ್ಲಿನ ಅನನ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸಹಕಾರಿಯ ನಿರ್ದೇಶಕ ಕೃಷ್ಣ ಪ್ರಸಾದ ಕೆದಿಲಾಯ ಪರಿಚಯಿಸಿದರು. ಸಹಕಾರಿಯ ಕಾನೂನು ಸಲಹೆಗಾರರು ಹಾಗೂ ಪುತ್ತೂರು ಟೌನ್ ಕೋ. ಓಪರೇಟಿವ್ ಬ್ಯಾಂಕ್. ನ ಅಧ್ಯಕ್ಷ ಕಿಶೋರ್ ಕೊಳತ್ತಾಯರವರನ್ನು ಸನ್ಮಾನಿಸಲಾಯಿತು. ಇವರ ಕಿರು ಪರಿಚಯವನ್ನು ಸಹಕಾರಿಯ ನಿರ್ದೇಶಕಿ ವತ್ಸಲಾ ರಾಜ್ಞಿ ಮಾಡಿದರು.

ಈ ಸಂದರ್ಭದಲ್ಲಿ ಸಹಕಾರಿಯ ಅತೀ ಹಿರಿಯ ಸದಸ್ಯರಾದ ಸುಬ್ರಹ್ಮಣ್ಯ ಕೊಳತ್ತಾಯರು ಉಪಸ್ಥಿತರಿದ್ದರು. ಸಹಕಾರಿಯ ಕಿರಿಯ ಸದಸ್ಯ ಆದಿತ್ಯ ಪುತ್ತೂರಾಯ ಪ್ರಾರ್ಥಿಸಿದರು. ನಿರ್ದೇಶಕ ಡಾ.ಸುರೇಶ ಪುತ್ತೂರಾಯ ವಂದಿಸಿದರು. ಸಹಕಾರಿಯ ಸಿಬ್ಬಂದಿಗಳಾದ ಅಶ್ವಿನಿ, ಸತ್ಯಶ್ರೀ ಎಸ್.ಭಟ್, ದೀಕ್ಷಾ, ಚಿದಾನಂದ ಸಹಕರಿಸಿದರು.

LEAVE A REPLY

Please enter your comment!
Please enter your name here