ಅಸಹಾಯಕರಿಗೆ ಸಹಾಯವಾಗುವ ಕೆಲಸ ಒಕ್ಕೂಟದಿಂದ ಆಗಲಿ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಅನುಷ್ಠಾನಗೊಂಡ ಅನುಗ್ರಹ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಒಳಮೊಗ್ರು ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.18 ರಂದು ಕುಂಬ್ರದ ರೈತ ಸಭಾಭವನದಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಗೀತಾ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿ,ಮಾತನಾಡಿ, ಒಕ್ಕೂಟವು ಕೇವಲ ಸಾಲ ನೀಡುವಲ್ಲಿ ಮಾತ್ರವಲ್ಲದೆ ಅಸಹಾಯಕರಿಗೆ ಯಾವುದಾದರೂ ರೂಪದಲ್ಲಿ ಸಹಾಯ ಮಾಡುವಂತಾಗಬೇಕು, ಒಕ್ಕೂಟವು ಸ್ವಚ್ಛತೆಯ ಕಾರ್ಯದಲ್ಲಿ ಅತ್ಯುತ್ತಮವಾದ ಸೇವೆ ಸಲ್ಲಿಸಿರುವುದಾಗಿ ಪ್ರಶಂಶಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ.ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾ ಪ್ರಿಯ ಇವರು ಮುಟ್ಟಿನ ಕಪ್ಪಿನ ಬಗ್ಗೆ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಇಂಚರ ಫೌಂಡೇಶನ್ ಕೌನ್ಸಿಲರ್ ಸೌಮ್ಯರವರು ಮಾನಸಿಕ ಸಮಸ್ಯೆಯ ಬಗ್ಗೆ ಹಾಗೂ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್ ಆಫ್ ಬರೋಡಾದ ಡಯಾನರವರು ಸದಸ್ಯರಿಗೆ ವಿಮೆಯ ಬಗ್ಗೆ ಮತ್ತು ಬ್ಯಾಂಕ್ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಶೀನಪ್ಪ ನಾಯ್ಕ, ಮಹೇಶ್ ರೈ ಕೇರಿ, ಸುಂದರಿ, ರೇಖಾ ಯತೀಶ್ ಬಿಜತ್ರೆ, ಒಕ್ಕೂಟದ ಕೋಶಾಧಿಕಾರಿ ಸುಲೋಚನಾ ರಾಮಕೃಷ್ಣ, ಕಾರ್ಯದರ್ಶಿ ದೀಪಿಕಾ, ಉಪಾಧ್ಯಕ್ಷೆ ಪದ್ಮಾವತಿ ಉಪಸ್ಥತಿರಿದ್ದರು. ಹಣಕಾಸು ಸಾಕ್ಷರತಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದ ಗ್ರಾಪಂ ಅಧ್ಯಕ್ಷೆ ಕೇಂದ್ರದ ಕೀಯನ್ನು ಬಿ.ಸಿ ಸಖಿ ಅಂಕಿತರವರಿಗೆ ಹಸ್ತಾಂತರಿಸಿದರು. ಸುನೀತ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಮಲ್ಲಿಕಾ ಎಸ್ ರೈಯವರು ಒಕ್ಕೂಟದ ಒಂದು ವರ್ಷದ ವರದಿಯನ್ನು ಮಂಡನೆ ಮಾಡಿದರು. ಉಷಾರವರು 2024-25 ನೇ ಸಾಲಿನ ಒಕ್ಕೂಟದ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು. ಚಂದ್ರಕಲಾ ವಂದಿಸಿದರು. ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾರವರು ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ವಾರ್ಷಿಕ ಮಹಾಸಭೆ