ನೆಲ್ಯಾಡಿ: 20 ದಿನದ ಹಿಂದೆ ಔಷಧಿ ಸಿಂಪಡಣೆ ವೇಳೆ ಅಡಿಕೆ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಲ್ಯ ನಿವಾಸಿ ನಾಗೇಶ್(35ವ.) ಅವರು ಆ.20ರಂದು ಮೃತಪಟ್ಟಿದ್ದಾರೆ.
ಬಲ್ಯ ಗ್ರಾಮದ ಬನಾರಿ ನಿವಾಸಿಯಾಗಿರುವ ನಾಗೇಶ್ ಅವರು ಜು.27ರಂದು ಬೆಳಿಗ್ಗೆ ಅವರ ತೋಟದಲ್ಲಿ ಅಡಿಕೆ ಮರಕ್ಕೆ ಔಷಧಿ ಸಿಂಪಡಣೆ ವೆಳೆ ಅಡಿಕೆ ಮರರಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಬಳಿಕ ಪುತ್ತೂರು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಪಿಸಿಯೋಥೆರಫಿ ಬಗ್ಗೆ ಕರೆದುಕೊಂಡು ಬಂದು ಬಳಿಕ ಜು.31ರಂದು ಮತ್ತೆ ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ನಾಗೇಶ್ರವರು ಚಿಕಿತ್ಸೆಯಲ್ಲಿ ಚೇತರಿಕೆ ಕಂಡು ಬಾರದೇ ಇದ್ದ ಹಿನ್ನೆಲೆಯಲ್ಲಿ ಮನೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದಂತೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಆ.20ರಂದು ಮನೆಗೆ ಕರೆದುಕೊಂಡು ಬಂದಿದ್ದರು. ಸಂಜೆ ನಾಗೇಶ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಾತನಾಡದೇ ಇದ್ದುದರಿಂದ ಮನೆಯವರು ಚಿಕಿತ್ಸೆಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮೃತ ನಾಗೇಶ್ರವರ ಸಹೋದರ ಸುಕೇಶ್ ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.