





ಕಾಣಿಯೂರು: ಆ.19ರ ಮುಂಜಾನೆ ವೇಳೆಗೆ ಬೀಸಿದ ಭೀಕರ ಬಿರುಗಾಳಿಗೆ ಹಾನಿಗೊಂಡ ಪ್ರದೇಶಗಳಿಗೆ ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ ಆ.21ರಂದು ಭೇಟಿ ಪರಿಶೀಲನೆ ನಡೆಸಿದರು.


ಅಬ್ಬರದ ಬಿರುಗಾಳಿಗೆ ಸಾವಿರಕ್ಕೂ ಮಿಕ್ಕಿ ಅಡಿಕೆ ಮರ ಧರಾಶಾಹಿಯಾಗಿ ನಾಶಗೊಂಡು ಅಪಾರ ನಷ್ಟ ಸಂಭವಿಸಿರುವ ದೋಳ್ಪಾಡಿ ಗ್ರಾಮದ ರಾಮಕೃಷ್ಣ ಬೋಳ ಹಾಗೂ ಈ ಭಾಗದಲ್ಲಿ ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಗ್ರಾಮ ಸಹಾಯಕ ಪುರಂದರ ಮತ್ತಿತರರು ಉಪಸ್ಥಿತರಿದ್ದರು.














