ಕರಾವಳಿಯಲ್ಲಿ ಅಗ್ನಿಶಾಮಕ ದಳ ಬಲವರ್ಧನೆ ಅಗತ್ಯ – ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಕಿಶೋರ್ ಕುಮಾರ್ ಆಗ್ರಹ

0

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ತಿನಲ್ಲಿ, ಕರ್ನಾಟಕ ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕ 2025 ಕುರಿತು ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ,‘ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾನ್ಸೂನ್ ಮಳೆಯ ಸಮಯದಲ್ಲಿ ಭಾರೀ ಹಾನಿ ಸಂಭವಿಸುತ್ತಿದೆ. ಆದರೆ ಅಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ದಳವು ಫಸ್ಟ್ ರೆಸ್ಪಾಂಡರ್ ಆಗಿ ಸೂಕ್ತವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಮೊದಲು ಮಾತನಾಡಿದ್ದ ಕಾಂಗ್ರೆಸ್ ಸದಸ್ಯ ಐವನ್ ಡಿ’ಸೋಜ,‘ಅಗ್ನಿಶಾಮಕ ದಳದ ಬಳಿ ಸೂಕ್ತ ವಾಹನಗಳಿಲ್ಲ,ತುಕ್ಕು ಹಿಡಿದು ಹೋಗಿದೆ’ ಎಂದು ಹೇಳಿದಾಗ ಗೃಹಸಚಿವರು ಅವರ ಮಾತನ್ನು ನಿರ್ಲಕ್ಷಿಸಿ,‘ಐವನ್ ಟ್ರ್ಯಾಕ್ ತಪ್ಪಿದ್ದಾರೆ’ಎಂದು ಪ್ರತಿಕ್ರಿಯಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು,‘ಐವನ್ ಡಿ’ಸೋಜ ಅವರು ಟ್ರ್ಯಾಕ್ ತಪ್ಪಿಲ್ಲ.ನಮ್ಮ ಕರಾವಳಿಯಲ್ಲಿ ವರುಣನ ಆರ್ಭಟಕ್ಕೆ ಜನತೆ ತತ್ತರಿಸಿದ್ದಾರೆ.ಉಳ್ಳಾಲದಲ್ಲಿ ಸಂಭವಿಸಿದ ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಮನೆ ಕುಸಿತದಲ್ಲಿ ಸಾವನ್ನಪ್ಪಿದರು. ಅವರ ತಾಯಿ ತನ್ನೆರಡು ಕಾಲುಗಳನ್ನು ಕಳೆದುಕೊಂಡರು.ಇಂತಹ ದುಃಖಕರ ಘಟನೆಗಳನ್ನು ತಡೆಯಲು ಜಿಲ್ಲೆಯಲ್ಲಿ ಅಗ್ನಿಶಾಮಕ ದಳದಲ್ಲಿ ಹೆಚ್ಚಿನ ಯುವಕರನ್ನು ಸೇರಿಸಿ, ವಿಶೇಷ ಟಾಸ್ಕ್ -ರ್ಸ್ ರಚನೆ ಅಗತ್ಯವಾಗಿದೆ’ಎಂದು ಗೃಹ ಸಚಿವರನ್ನು ಒತ್ತಾಯಿಸಿದರು. ಮುಂದೆ ಇಂತಹ ಪ್ರಕೃತಿ ಆಪತ್ತುಗಳು ಸಂಭವಿಸಿದರೆ ತಕ್ಷಣ ಸ್ಪಂದಿಸಲು ಮತ್ತು ಪ್ರಾಣ ಹಾನಿಯನ್ನು ಕಡಿಮೆ ಮಾಡಲು ಕರಾವಳಿ ಜಿಲ್ಲೆಗಳಲ್ಲಿ ಅಗ್ನಿಶಾಮಕ ದಳವನ್ನು ಬಲವರ್ಧಿಸಬೇಕು’ ಎಂದೂ ಕಿಶೋರ್ ಮನವಿ ಮಾಡಿದರು.



ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಸ್ವಾಗತಿಸಿ, ಕಾರ್ಯದರ್ಶಿ ವಸಂತ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ರವಿ ಪೂಜಾರಿ ಕೆ, ಪಂಚಾಯತ್ ಸದಸ್ಯರಾದ ಸದಾನಂದ ಆಚಾರ್ಯ, ಚಂದ್ರಶೇಖರ, ಶ್ವೇತಾ ಕುಮಾರ್, ಕೃಷ್ಣ ಗಾಣಂತಿ, ರೂಪಾಶ್ರೀ, ವಾರಿಜ, ಸುಮತಿ, ಸುನಂದ ಬಾರ್ಕುಳಿ, ಶಾರದಾ, ಕಡಬ ಠಾಣೆಯ ಆಲಂಕಾರು ಬೀಟ್ ಪೊಲೀಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here