ಪುತ್ತೂರು: ವಿಶಿಷ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನದೊಡನೆ ಬಲು ಪ್ರಸಿದ್ಧಿ ಪಡೆದಿರುವ ಸೆಲ್ಟೋಸ್, ಸೋನೆಟ್, ಕ್ಯಾರೆನ್ಸ್ ಹಾಗೂ ಸೈರಸ್ ಕಾರುಗಳ ಮೂಲಸ್ಥಾನ ದಕ್ಷಿಣ ಕೊರಿಯದಲ್ಲೇ ಎರಡನೆಯ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಯಾ ಮೋಟಾರ್ಸ್ ಇದರ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಬಳಿಯ ಡೀಲರ್ ಎ.ಆರ್.ಎಂ ಕಿಯಾ ಇದರ ಪ್ರಥಮ ಶಾಖೆ ಆ.22 ರಂದು ಮುಕ್ರಂಪಾಡಿಯಲ್ಲಿ ಶುಭಾರಂಭಗೊಂಡಿತು.

ನೂತನ ಶಾಖೆಯ ಉದ್ಘಾಟನೆಯನ್ನು ಸ್ವರ್ಣೋದ್ಯಮಿ ಜಿ.ಎಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ದೀಪ ಪ್ರಜ್ವಲನೆ ಮೂಲಕ ನೆರವೇರಿಸಿದರು. ಬಳಿಕ ಮಾತನಾಡಿ ಕಿಯಾ ಮಳಿಗೆ ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವುದು ಸಂತಸದ ವಿಚಾರವಾಗಿದ್ದು, ಜಗತ್ತಿನ ಆಟೋಮೊಬೈಲ್ ಕ್ಷೇತ್ರವನ್ನು ನೋಡಿದಾಗ ಭಾರತವು ಜಗತ್ತಿನ ಅತಿದೊಡ್ಡ ವಲಯಗಳಲ್ಲಿ ಒಂದಾಗಿದ್ದು, ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡಿದೆ. ಉದ್ಯಮ ಕ್ಷೇತ್ರದಲ್ಲಿ ಆರೂರು ಕುಟುಂಬ ಸುಮಾರು ಐದು ತಲೆಮಾರುಗಳಿಂದ ಸೇವೆಯಲ್ಲಿದ್ದು, ಸಂಸ್ಥೆಯೊಂದು ತೃಪ್ತಿಕರ ಸೇವೆಯನ್ನು ಗ್ರಾಹಕ ವರ್ಗಕ್ಕೆ ಕೊಡುವುದು ಕೂಡ ಚಾಲೆಂಜಿಂಗ್ ಕಾರ್ಯವು ಕೂಡ. ಇವನ್ನೆಲ್ಲಾ ಆರೂರು ಕುಟುಂಬ ಅತ್ಯಂತ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದು, ನೂತನ ಸಂಸ್ಥೆಗೆ ಉತ್ತಮ ರೀತಿಯ ಸಹಕಾರ ಸಿಗಲಿಯೆಂದು ಹೇಳಿ ಹಾರೈಸಿದರು.
ಮಳಿಗೆಗೆ ಜಾಗ ಒದಗಿಸಿದ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಮುರಳೀಧರ ಶೆಟ್ಟಿಯವರು ಕೂಡ ಶುಭಕೋರಿದರು. ಸಂಸ್ಥೆಯ ನಿರ್ದೇಶಕರಾದ ಆರೂರ್ ವರುಣ್ ರಾವ್ ಸಂಸ್ಥೆ ಕಾರ್ಯವೈಖರಿ ಬಗ್ಗೆ ವಿವರಣೆ ನೀಡಿದರು. ವೇದಿಕೆಯಲ್ಲಿ ಕಿಯಾ ಏರಿಯಾ ಸೇಲ್ಸ್ ಮ್ಯಾನೇಜರ್ ಅರುಣ್ ಕಾರ್ತಿಕ್ ಹಾಗೂ ಆಡಳಿತ ನಿರ್ದೇಶಕರಾದ ಆರೂರ್ ಗಣೇಶ್ ರಾವ್ ಹಾಜರಿದ್ದರು. ಅತಿಥಿಗಳನ್ನು ಆರೂರ್ ಕುಟುಂಬ ಸದಸ್ಯರು ಸ್ವಾಗತಿಸಿದರು.
ಎಂ ಸಂಜೀವ ಶೆಟ್ಟಿ ಮಳಿಗೆಯ ಗಿರಿಧರ್ ಶೆಟ್ಟಿ ಹಾಗೂ ಮನೋಹರ್ ಶೆಟ್ಟಿ ಕುಟುಂಬ, ಜಿ.ಎಲ್ ಸುಧಾನ್ವ ಆಚಾರ್ಯ ಕುಟುಂಬ, ಸಹಿತ ಗ್ರಾಹಕ ವರ್ಗ ಮತ್ತು ಸಿಬಂದಿಗಳು ಹಾಜರಿದ್ದರು. ಬಳಿಕ ವಿನೂತನ ಕ್ಯಾರೆನ್ಸ್ ಕಾರನ್ನು ಪ್ರಥಮ ಗ್ರಾಹಕ, ನಿತ್ಯ ಫುಡ್ಸ್ (ನಿತ್ಯ ಚಪಾತಿ) ಮಾಲಕ ರಾಮಕೃಷ್ಣ ಇಟ್ಟಿಗುಂಡಿ ಕುಟುಂಬಕ್ಕೆ ಅತಿಥಿಗಳ ಮುಖೇನ ಕೀಲಿ ಹಸ್ತಾಂತರ ನಡೆಯಿತು.