ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ನೇತೃತ್ವದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆ.27ರಿಂದ 29ರವರೆಗೆ ಕೋಡಿಂಬಾಡಿಯ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯಲಿದೆ.
ಆ.27ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠಾ ಪೂಜೆ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟುರವರಿಂದ ಧ್ವಜಾರೋಹಣ ನಡೆದ ಬಳಿಕ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದಿಂದ ಮತ್ತು ಮಠಂತಬೆಟ್ಟು ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ರಾತ್ರಿ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ವಿವೇಕಾನಂದ ಬಿ.ಎಡ್.ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್,ಕೊಡಿಂಬಾಡಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಮಾಂಡೋವಿ ಮೋಟಾರ್ಸ್ ಸುಳ್ಯ ಶಾಖೆಯ ಮ್ಯಾನೇಜರ್ ಚಂದ್ರಶೇಖರ ಸನಿಲ್,ಕೋಡಿಂಬಾಡಿ ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭೆಯ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 9 ರಿಂದ ಶ್ರೀ ಶಾರದಾ ಕಲಾಕೇಂದ್ರ ಪುತ್ತೂರು ಇದರ ವಿದ್ಯಾರ್ಥಿಗಳಿಂದ ನೃತ್ಯಾಭಿವಂದನೆ ಹಾಗೂ ಉಷಾ ಪರಿಣಯ ನೃತ್ಯರೂಪಕ ನಡೆಯಲಿದೆ. ಈ ದಿನ ಸ್ವಯಂಸೇವಕರಾಗಿ ಕೋಡಿಂಬಾಡಿಯ ವನಿತಾ ಸಮಾಜ ಮತ್ತು ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದವರು ಸಹಕರಿಸಲಿದ್ದಾರೆ.
ಆ.28ರಂದು ಬೆಳಿಗ್ಗೆ ವೇದಮೂರ್ತಿ ಶ್ರೀವತ್ಸ ಕೆದಿಲಾಯ ನೇತೃತ್ವದಲ್ಲಿ 108 ತೆಂಗಿನ ಕಾಯಿ ಗಣಯಾಗ, ಗಣಯಾಗದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನವೀನ್ ಬೆಳ್ಳಿಪ್ಪಾಡಿ ಮತ್ತು ತಂಡದವರಿಂದ ಸಂಗೀತ ಸ್ವರಸಂಗಮ, ಸಂಜೆ 4.15ರಿಂದ ಕೋಡಿಂಬಾಡಿ ಅಶ್ವಥ ಕಟ್ಟೆ `ಧರ್ಮ ಶ್ರೀ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಸಂಜೆ 6 ರಿಂದ ಪುಷ್ಪರಾಜ್ ನೆಲ್ಯಾಡಿ ಮತ್ತು ಬಳಗದಿಂದ ಮಾಯಾ ಮ್ಯಾಜಿಕ್ ನಡೆಯಲಿದೆ.
ರಾತ್ರಿ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ ಪೂಜಾರಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಟ್ರಪ್ಪಾಡಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಭಟ್, ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಸಂಚಾಲಕ ಯು.ಜಿ ರಾಧ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಂ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಯಶೋದಾ ಎನ್.ಎಂ ಭಾಗವಹಿಸಲಿದ್ದಾರೆ. ಈ ದಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೋಡಿಂಬಾಡಿ ಒಕ್ಕೂಟ ಮತ್ತು ಕೋಡಿಂಬಾಡಿಯ ಅಶ್ವತ್ಥಕಟ್ಟೆಯ ಧರ್ಮಶ್ರೀ ಕಲಾವೃಂದದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.
ಆ.29ರಂದು ಬೆಳಿಗ್ಗೆ ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿ ಬೊಳುವಾರು ಪುತ್ತೂರು ಇವರಿಂದ ಭಜನಾ ಸೇವೆ, ಗಣಹೋಮ, ಅಶ್ವತ್ಥಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ವಿಸರ್ಜನಾ ಪೂಜೆ, ಬಳಿಕ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ಅಶ್ವತ್ಥಕಟ್ಟೆ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿ ವಿನಾಯಕನಗರದಿಂದಾಗಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಶಾಂತಿನಗರದ ಕೆರೆಯಲ್ಲಿ ಶ್ರೀ ಮಹಾಗಣಪತಿ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಶೋಭಾಯಾತ್ರೆಗೆ ನೆಕ್ಕಿಲಾಡಿ ಅಂಬೆಲದ ಶ್ರೀ ರಾಜಶ್ರೀ ಭಜನಾ ಮಂಡಳಿಯವರ ಕುಣಿತ ಭಜನೆ ಮೆರಗು ನೀಡಲಿದೆ. ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇಡಿಯಾಪು ಒಕ್ಕೂಟದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಅರ್ಚಕ ಬಾಲಕೃಷ್ಣ ಐತಾಳ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ ಎಂದು ಗಣೇಶೋತ್ಸವಕೋಡಿಯಾಡಿ ಚಾವಡಿಗುತ್ತು, ಅಧ್ಯಕ್ಷ ಕೇಶವ ಭಂಡಾರಿ ಕೈಪ, ಗೌರವಾಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಪ್ರಧಾನ ಕಾರ್ಯದರ್ಶಿ ದೇವಾನಂದ ಕೆ. ಕೋಡಿಂಬಾಡಿ, ಕೋಶಾಧಿಕಾರಿ ಭರತ್ ಗೌಡ ನಿಡ್ಯ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ದೀಕ್ಷಿತ್ ಎಂ.ಎಲ್. ಮೇಲಿನ ಹಿತ್ತಿಲು, ಅಶೋಕ ಪ್ರಭು ದಾರಂದಕುಕ್ಕು, ಉಮೇಶ್ ಪನಿತೋಟ, ದಯಾನಂದ ಪಳ್ಳತ್ತಾರು, ಚೆನ್ನಣ್ಣ ಗೌಡ ಬರೆಮೇಲು, ಶಾರದಾ ಸಿ. ರೈ ಸರೋಳಿ, ಸತೀಶ್ ಮಡಿವಾಳ ಸೇಡಿಯಾಪು, ಚಂದ್ರಶೇಖರ ಕುಲಾಲ್ ಸೇಡಿಯಾಪು, ಶೇಖರ ಪೂಜಾರಿ ನಿಡ್ಯ, ಗೌರವ ಸಲಹೆಗಾರರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೆ. ಬಾಲಕೃಷ್ಣ ಬೋರ್ಕರ್ ಕೂರ್ನಡ್ಕ, ಕೆ. ಜಯಾನಂದ ಕೋಡಿಂಬಾಡಿ, ಎ.ಮುರಳೀಧರ ರೈ ಮಠಂತಬೆಟ್ಟು, ಪಿ.ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ಉಲ್ಲಾಸ್ ಕೋಟ್ಯಾನ್ ಪಳ್ಳತ್ತಾರು, ಯನ್.ಸುಭಾಸ್ ನಾಯಕ್ ನೆಕ್ಕರಾಜೆ, ರಮೇಶ್ ನಾಯಕ್ ನಿಡ್ಯ ಮತ್ತು ನಿರಂಜನ ರೈ ಮಠಂತಬೆಟ್ಟು ತಿಳಿಸಿದ್ದಾರೆ.