ಪುತ್ತೂರು: ನಗರದ ಬೊಳುವಾರಿನ ಪ್ರಗತಿ ಆಸ್ಪತ್ರೆ ಮುಂಭಾಗದಲ್ಲಿರುವ ಹಿರಣ್ಯ ಕಾಂಪ್ಲೆಕ್ಸ್ನಲ್ಲಿ ಆ.25 ರಂದು ಉಷಾ ಮೆಡಿಕಲ್ಸ್ ನ 4ನೇ ಶಾಖೆ ಶುಭಾರಂಭಗೊಂಡಿತು.
ಮೆಡಿಕಲ್ ಉದ್ಘಾಟಿಸಿ ಮಾತನಾಡಿದ ಪ್ರಗತಿ ಹಾಸ್ಪಟಲ್ ನ ಹೃದ್ರೋಗ ತಜ್ಞ ಡಾ.ಶ್ರೀಪತಿ ರಾವ್, 28 ವರ್ಷಗಳ ಮೆಡಿಕಲ್ ವ್ಯವಹಾರ ಉತ್ತುಂಗಕ್ಕೇರುತ್ತಿದ್ದು, ಇದಕ್ಕೆ ಮಾಲಕ ಗಣೇಶ್ ಭಟ್ ಅವರ ಪರಿಶ್ರಮವೇ ಕಾರಣ. ಇವರ ಉತ್ಸಾಹ, ಸಾಮಾಜಿಕ ಕಳಕಳಿಗೆ ಅಭಿನಂದನೆಗಳು. ಇದರಲ್ಲಿ ಕೇವಲ ಔಷಧಿಗಳಯ ಮಾತ್ರವಲ್ಲದೆ, ವೀಲ್ ಚೇರ್, ವಾಕಿಂಗ್ ಸ್ಟಿಕ್ ನಂತಹ ಇನ್ನಿತರ ಪರಿಕರಣಗಳು ಲಭ್ಯವಾಗುತ್ತದೆ. ಉಷಾ ಮೆಡಿಕಲ್ಸ್ ನ ಶಾಖೆಗಳು ಇನ್ನೂ ಹೆಚ್ಚಾಗಲಿ. ಕ್ಲಿನಿಕಲ್ ಮೆಡಿಕಲ್ ಕಲಿಸುವ ಶಿಕ್ಷಕರು ಕಡಿಮೆಯಾಗಿದ್ದಾರೆ. ಹೀಗಾಗಿ ಕ್ಲಿನಿಕಲ್ ಮೆಡಿಸಿನ್ ಉಳಿಸುವ ಕಾರ್ಯ ನಡೆಯಬೇಕಿದೆ ಎಂದರು.

ದೀಪ ಪ್ರಜ್ವಲಿಸಿ ಮಾತನಾಡಿದ ಬ್ರಹ್ಮಶ್ರೀ ನಾಗೇಶ್ ತಂತ್ರಿ ಕೆಮ್ಮಿಂಜೆ, ಉಷಾ ಮೆಡಿಕಲ್ಸ್ ಪ್ರಾರಂಭವಾಗಿ 28 ವರ್ಷಗಳಾಗಿದ್ದು, ಇದರ ನಾಲ್ಕನೇ ಶಾಖೆಯೂ ಉದ್ಘಾಟಿಸಲಾಗಿದೆ. ಇದರ ಮಾಲಕರ ಸೇವಾ ದಕ್ಷತೆ, ನಗುಮೊಗದ ಸೇವೆಯೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಿ ಶುಭಹಾರೈಸಿದರು.
ಮುಖ್ಯ ಅತಿಥಿ ಮಹಾವೀರ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಸುರೇಶ್ ಕೆ. ಪುತ್ತೂರಾಯ ಮಾತನಾಡಿ, ಪುತ್ತೂರಿನ ನಂ.1 ಮೆಡಿಕಲ್ ಉಷಾ ಮೆಡಿಕಲ್ಸ್. ಇಲ್ಲಿ ಎಲ್ಲಾ ಔಷಧಿಗಳು ಲಭ್ಯವಿರುತ್ತದೆ. ಈ ನಾಲ್ಕನೆ ಮಳಿಗೆಯೂ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಶುಭಹಾರೈಸಿದರು.
ಮಾಯಿದೆ ದೇವುಸ್ ಚರ್ಚ್ ನ ಧರ್ಮುಗುರು ವಂ. ರೆ. ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಯಾವುದೇ ಕಾರ್ಯವನ್ನು ತ್ಯಾಗ, ಶ್ರಮದಿಂದ ಮಾಡಿದರೆ ಯಶಸ್ಸು ಸಾಧ್ಯ. ನಮ್ಮ ಜೀವನದಲ್ಲಿ ಸಂತೋಷ ಬೇಕೆನ್ನುವರು ಅನೇಕರಿದ್ದಾರೆ. ಯಾವುದೇ ದ್ವೇಷ, ಸ್ವಾರ್ಥದಿಂದ ಬದುಕಿದಾಗ ನೆಮ್ಮದಿ ಸಾಧ್ಯವಿಲ್ಲ.
ಆದರೆ ಸಂತೋಷ, ನೆಮ್ಮದಿ ಬೇಕೆಂದರೆ ಆರೋಗ್ಯವೂ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಉಷಾ ಮೆಡಿಕಲ್ಸ್ ಅವಶ್ಯಕತೆಗಳನ್ನು ಪೂರೈಸುತ್ತಿದೆ ಎಂದು ಹೇಳಿ ಶುಭಹಾರೈಸಿದರು.
ಮಾಡನ್ನೂರು ಜುಮ್ಮಾ ಮಸೀದಿ ಖತೀಬ ಎಸ್.ವಿ.ಮೊಹಮ್ಮದ್ ದಾರಿಮಿ ಉಪ್ಪಿನಂಗಡಿ ಮಾತನಾಡಿ, ಯಾವುದೇ ಒಂದು ರೋಗ ಬಂದರೆ ಅದಕ್ಕೆ ಔಷಧಿ ಇದ್ದೇ ಇರುತ್ತದೆ. ಅದರೆ ಅದನ್ನು ಕಂಡುಹುಡುಕಬೇಕಾಗಿದೆ. ಗಣೇಶ್ ಭಟ್ ಅವರ ನಗುಮೊಗದ ಸೇವೆಯೇ ಅವರಿಗೆ ಶ್ರೀರಕ್ಷೆ. ಇದೊಂದು ಆರೋಗ್ಯ ಸೇವೆಯಾಗಿದೆ. ಆರೋಗ್ಯವಾಗಿದ್ದರಷ್ಟೇ ಸಮಾಜ ಅಭಿವೃದ್ಧಿಯಾದಂತೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಷಾ ಮೆಡಿಕಲ್ಸ್ ನ ಐದನೇ ಶಾಖೆಯೂ ಪ್ರಾರಂಭವಾಗಲಿ ಎಂದು ಹೇಳಿ ಶುಭಹಾರೈಸಿದರು.
ಕಟ್ಟಡ ಮಾಲಕಿ ವಜ್ರೇಶ್ವರಿ ಜಿ.ಭಟ್ ಹಿರಣ್ಯ ಮಾತನಾಡಿ, ಉಷಾ ಮೆಡಿಕಲ್ಸ್ ನಮ್ಮ ಕಡಕ್ಕೆ ಬಂದಿರುವುದು ಹೆಮ್ಮೆಯ ವಿಚಾರ. ಕಟ್ಟಡದ ಸೌಂದರ್ಯವೂ ಹೆಚ್ಚಿದಂತಾಗಿದೆ ಎಂದು ಹೇಳಿ ಶುಭಹಾರೈಸಿದರು.
ಕರ್ನಾಟಕ ರಾಜ್ಯ ಕೆಮೆಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಸದಸ್ಯ ಡಿ.ಐ.ಪುರುಷೋತ್ತಮ್, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಮತ್ತಿತರರು ಆಗಮಿಸಿ ಶುಭಹಾರೈಸಿದರು. ಉಷಾ ಮೆಡಿಕಲ್ ಮಾಲಕ ಪಿ.ಗಣೇಶ್ ಭಟ್ ಅವರ ಪತ್ನಿ ಅರುಣಾ ಜಿ.ಭಟ್, ಪುತ್ರ ಆದಿತ್ಯ ಕಶ್ಯಪ್ ಎಂ., ಸಿಬ್ಬಂದಿ ವರ್ಗ ಹಾಗೂ ಬಂಧುಬಳಗದವರು ಉಪಸ್ಥಿತರಿದ್ದರು. ವರ್ಷಲಕ್ಷ್ಮೀ ಪ್ರಾರ್ಥಿಸಿದರು. ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿರು. ಉಷಾ ಮೆಡಿಕಲ್ಸ್ ಮಾಲಕ ಪಿ.ಗಣೇಶ್ ಭಟ್ ವಂದಿಸಿದರು.