ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: 2025-26ನೇ ಸಾಲಿನ ಶಾಲಾ ಕಾರ್ಯಕಾರಿ ಸಮಿತಿಗಳ ಪದಗ್ರಹಣ ಸಮಾರಂಭ ನಡೆಯಿತು. ಪ್ರಸಕ್ತ ವರ್ಷದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ವಿಘ್ನೇಶ್ ವಿಶ್ವಕರ್ಮ, ಉಪಾಧ್ಯಕ್ಷೆಯಾಗಿ ಹೇಮಾವತಿ ಆಯ್ಕೆಗೊಂಡರು.

ಮಾತೃ ಭಾರತಿಯ ಅಧ್ಯಕ್ಷೆಯಾಗಿ ಶ್ರೀದೇವಿ ಕೆ.ಎನ್, ಉಪಾಧ್ಯಕ್ಷೆಯಾಗಿ ಪವಿತ್ರಾ ಕೆ ಹಾಗೂ ಅನ್ನಪೂರ್ಣಾ ಸಮಿತಿಯ ಕಾರ್ಯಕಾರಿ ಅಧ್ಯಕ್ಷರಾಗಿ ಶ್ಯಾಮಲ ನಾಯಕ್, ಉಪಾಧ್ಯಕ್ಷರಾಗಿ ಮುರಳೀಧರ ಎನ್‌ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ರಘುರಾಜ ಉಬರಡ್ಕ ಮಾತಾನಾಡಿ, ಶಾಲಾ ಸಮಿತಿಗಳ ಮಹತ್ವದ ಬಗ್ಗೆ ತಿಳಿಸಿದರು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ, ಸಂಚಾಲಕರಾದ ವಸಂತ ಸುವರ್ಣ, ಕೋಶಾಧಿಕಾರಿಗಳಾದ ಅಶೋಕ್‌ ಕುಂಬ್ಳೆ ಹಾಗೂ ಶಾಲಾ ಪ್ರೌಢ ವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ, ಪ್ರಾಥಮಿಕ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಸಹಶಿಕ್ಷಕಿ ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here