ಬೆಟ್ಟಂಪಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇದರ ವತಿಯಿಂದ 40 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆ. 27 ಮತ್ತು 28ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಜರಗಲಿದೆ.
ಆ. 27ರಂದು ಶ್ರೀ ಗಣೇಶ ವಿಗ್ರಹ ಪ್ರತಿಷ್ಟಾಪನೆ ನಡೆಯಲಿದೆ. ಪ್ರಗತಿಪರ ಕೃಷಿಕ ಮುತ್ತಣ್ಣ ಶೆಟ್ಟಿ ಚೆಲ್ಯಡ್ಕ ಉದ್ಘಾಟಿಸಲಿದ್ದಾರೆ. ನಂತರ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಗಣಪತಿ ಹೋಮ ಜರಗಲಿದೆ.
ಮಹಾಗಣಪತಿಗೆ ರಂಗಪೂಜೆ, ರಸಮಂಜರಿ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ‘ನಾಗಮಾಣಿಕ್ಯ’ ನಾಟಕ, ವಯಲಿನ್ ಸಿಂಗಾರಿ ಮೇಳ, ಕುಣಿತ ಭಜನೆ, ಕೇರಳ ಕಲಾತಂಡದ ಆಕರ್ಷಣೆಯೊಂದಿಗೆ ಶೋಭಾಯಾತ್ರೆ
ಬೆಳಿಗ್ಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ದೈವನರ್ತಕರಾದ ಡಾI ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಿತ್ತೂರು ಶುಭೋದಯ ಫ್ಯೂಯೆಲ್ಸ್ ನ ಗೋಪಾಲಕೃಷ್ಣ ಭಟ್ ಮಿತ್ತೂರು, ಮಹೇಶ್ವರ ಪೆಟ್ರೋಲಿಯಂನ ಶಿವಪ್ರಸಾದ ಕಿನಾರೆ, ಎವಿಜಿ ಸ್ಕೂಲ್ ಸಂಚಾಲಕ, ಇಂಜಿನಿಯರ್ ಎ.ವಿ. ನಾರಾಯಣ, ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ ನ ಮೋಹನದಾಸ ರೈ, ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು, ಪದ್ಮಶ್ರೀ ಮೆಡಿಕಲ್ ಮ್ಹಾಲಕ ತಾರನಾಥ ರೈ, ನ್ಯಾಯವಾದಿ ಅನಂತಕೃಷ್ಣ ಭಟ್, ಬಂಟ್ವಾಳ ತಾ.ಪಂ. ಸಹಾಯಕ ನಿರ್ದೇಶಕ ವಿಶ್ವನಾಥ ಬೈಲಮೂಲೆ, ಸಿವಿಲ್ ಇಂಜಿನಿಯರ್ ತಿಲಕ್ರಾಜ್ ಕರುಂಬಾರು, ಯುವ ಉದ್ಯಮಿ ಪ್ರಖ್ಯಾತ್ ಸಾಲಿಯಾನ್ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಮಹಾಪೂಜೆಯಾಗಿ ಶ್ರೀ ಗಣೇಶ ಪ್ರಸಾದ ಅನ್ನಸಂತರ್ಪಣೆ ಜರಗಲಿದೆ.
ಅಪರಾಹ್ನ ಬೆಟ್ಟಂಪಾಡಿ ಭ್ರಮರಾಂಬಿಕ ಭಜನಾ ತಂಡದವರಿಂದ ರಸಮಂಜರಿ ನಡೆಯಲಿದೆ. ಸಂಜೆ ವಿದುಷಿ ಗೌತಮಿ ಅನುದೀಪ್ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ, ಬಳಿಕ ವಾಣಿ ವೆಂಕಟಕೃಷ್ಣ ಭಟ್ ಮತ್ತು ವೀಣಾ ರಾಮಕೃಷ್ಣ ಭಟ್ ಬಳಗದವರಿಂದ ಶಾಸ್ತ್ರಿಯ ಸಂಗೀತ ನಡೆಯಲಿದೆ. ರಾತ್ರಿ ಶ್ರೀ ಮಹಾಗಣಪತಿಗೆ ರಂಗಪೂಜೆ ನಡೆದು ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಗಯಾಪದ ಕಲಾವಿದೆರ್ ಉಬಾರ್ ಅಭಿನಯಿಸುವ ‘ನಾಗಮಾಣಿಕ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.
ಆ. 28 ರಂದು ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ, ಗಣಪತಿಹೋಮ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ ಶ್ರೀ ಗಣೇಶ ಸ್ವಾಮಿಯ ಶೋಭಾಯಾತ್ರೆ ಜರುಗಿ ಚೆಲ್ಯಡ್ಕ ಪುಣ್ಯನದಿಯಲ್ಲಿ ವಿಗ್ರಹದ ಜಲಸ್ತಂಭನ ಮಹೋತ್ಸವ ಜರಗಲಿದೆ. ರಾತ್ರಿ ಚೆಲ್ಯಡ್ಕದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ವಯಲಿನ್ ನೊಂದಿಗೆ ಸಿಂಗಾರಿ ಮೇಳ, ಕೇರಳ ಕಲಾತಂಡದ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿವೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.