ನೆಲ್ಯಾಡಿ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಹಾಗೂ ಆದರ್ಶ ಯುವಕ ಮಂಡಲ ಶಾಂತಿನಗರ ಗೋಳಿತ್ತೊಟ್ಟು ಇವುಗಳ ಆಶ್ರಯದಲ್ಲಿ 21ನೇ ವರ್ಷದ ಶ್ರೀ ಗಣೇಶ ಚೌತಿ ದಿನಾಚರಣೆ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಶಾಂತಿನಗರ ಅಂಗನವಾಡಿ ಕೇಂದ್ರದ ಹಳೆವಿದ್ಯಾರ್ಥಿ ರಂಜಿತ್ಕುಮಾರ್ ಜೈನ್ ಉದ್ಘಾಟಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಶಾಂತಿನಗರ ಆದರ್ಶ ಯುವಕ ಮಂಡಲದ ಅಧ್ಯಕ್ಷ ಜಗದೀಶ್ ಅರ್ತಿಗುಳಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶಾಂತಿನಗರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ಪವನ್ಕುಮಾರ್ ರೈ ಕುದುಮಾರುಗುತ್ತು, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಶಾಂತಿನಗರ ಶಾಲಾ ಮುಖ್ಯಶಿಕ್ಷಕ ಮಂಜುನಾಥ ಮಣಕವಾಡ, ಉಪ್ಪಿನಂಗಡಿ ಪೊಲೀಸ್ ಠಾಣೆ ಸಿಬ್ಬಂದಿ ಕುಮಾರಸ್ವಾಮಿ, ಶಾಂತಿನಗರ ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಮೋನಪ್ಪ ಪೂಜಾರಿ ಡೆಂಬಳೆ, ಅಂಗನವಾಡಿ ಕಾರ್ಯಕರ್ತೆ ರೀತಾಕ್ಷಿ ಮುರಿಯೇಲು, ಶಾಂತಿನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರತಾಪಚಂದ್ರ ರೈ ಕುದುಮಾರುಗುತ್ತು ಉಪಸ್ಥಿತರಿದ್ದರು.
ಕುಶಾಲಪ್ಪ ನೂಜೋಲು ಕಾರ್ಯಕ್ರಮ ನಿರೂಪಿಸಿದರು. ಶಾಂತಿನಗರ ಆದರ್ಶ ಯುವಕ ಮಂಡಲದ ಉಪಾಧ್ಯಕ್ಷ ತೇಜಸ್ ಬರೆಮೇಲು, ಕಾರ್ಯದರ್ಶಿ ಗೋಪಾಲಕೃಷ್ಣ, ಕೋಶಾಧಿಕಾರಿ ಚಂದ್ರಶೇಖರ ನೂಜೋಲು, ಸದಸ್ಯರಾದ ಸುರೇಶ ಪೆರ್ಲ, ಜಯಂತ ಆರ್ತಿಗುಳಿ, ಸುಮಂತ್ ಕೆ. ಎಸ್., ಶಿವಪ್ರಸಾದ್, ಪುರುಷೋತ್ತಮ ಗುರುಂಪು, ಶರತ್, ನಾಗಪ್ರಸಾದ್ ಮುರಿಯೇಲು, ಅಕ್ಷಯ್ ಡೆಂಬಳೆ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ ಮುರಿಯೇಲು ಸಹಕರಿಸಿದರು.