ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ವಿಫಲಗೊಳಿಸಲು ಸನ್ಯಾಸಿ ಗುಡ್ಡೆ ಶ್ರೀ ಕ್ಷೇತ್ರದಲ್ಲಿ ಓಂ ನಮಃ ಶಿವಾಯ ಜಪ

0

ಪುತ್ತೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರ ಮತ್ತು ಷಡ್ಯಂತ್ರ ವನ್ನು ವಿಫಲಗೊಳಿಸಲು ವಿಶ್ವ ಹಿಂದೂ ಪರಿಷತ್ತು ಶಿವ ಪಂಚಾಕ್ಷರಿ ಜಪದ ಮೂಲಕ  ಆಧ್ಯಾತ್ಮಿಕ ಸಮರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಶ್ರೀ ರಾಮ ಮಂದಿರ ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇಲ್ಲಿ ಆ.29ರಂದು ಚೌತಿಯ ಪ್ರಯುಕ್ತ ವಿಶೇಷ ಭಜನಾ ಸೇವೆ ಸಂದರ್ಭ “ಓಂ ನಮಃ ಶಿವಾಯ” ಎಂಬ ಜಪ ಮಾಡಲಾಯಿತು. ಈ ಜಪದಲ್ಲಿ ಶ್ರೀ ರಾಮ ಮಂದಿರ ಆಡಳಿತ ಸಮಿತಿ, ಭಜನಾ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here