ಪುತ್ತೂರು: ಉಪ್ಪಿನಂಗಡಿ ರಾಮನಗರ ದಿ.ಜಾರ್ಜ್ ನೊರೋನ್ಹಾ ಹಾಗೂ ದಿ.ಮೇರಿ ಅಮ್ಮಣ್ಣಿ ನೊರೋನ್ಹಾರವರ ಪುತ್ರ ವಿಜಿ ಅಲೆಕ್ಸಾಂಡರ್ ನೊರೋನ್ಹಾ (59ವ.) ರವರು ಅಸೌಖ್ಯದಿಂದ ಸೆ.1ರಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಸೋನಿ ಮ್ಯಾಥ್ಯೂ, ಪುತ್ರಿ ಶಿಫಾಲಿ, ಪುತ್ರ ಆಲನ್, ಆಲ್ವಿನ್, ಸಹೋದರ ಜೇಮ್ಸ್ ಪ್ರಸಾದ್ ನೊರೋನ್ಹಾ, ಸಹೋದರಿಯರಾದ ಝೀಟಾ ರೀಟಾ ನೊರೊನ್ಹಾ, ರೂಪ ಅಂಜಲಿ ಡಿ’ಸೋಜರವರನ್ನು ಅಗಲಿದ್ದಾರೆ.
ದೇಹದಾನ
ಮೃತ ವಿಜಿ ಅಲೆಕ್ಸಾಂಡರ್ ನೊರೋನ್ಹಾರವರ ಮೃತದೇಹವನ್ನು ಮೃತರ ಇಚ್ಛಾ ಪ್ರಕಾರ ಮಂಗಳೂರಿನ ಫಾ.ಮುಲ್ಲರ್ಸ್ ಆಸ್ಪತ್ರೆಗೆ ದೇಹದಾನ ಮಾಡಲಾಗುತ್ತಿದ್ದು, ದೇಹದಾನ ಮಾಡುವ ಮೊದಲು ಮಂಗಳೂರಿನ ಬಿಕರ್ನಕಟ್ಟೆ ಇನ್ಫಂಟ್ ಜೀಸಸ್ ಚರ್ಚ್ ನಲ್ಲಿ ಸೆ.1 ರಂದು ಅಪರಾಹ್ನ(2 ಗಂಟೆಗೆ)ದಿವ್ಯ ಬಲಿಪೂಜೆ ಜರಗಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.