ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ಅಲೋಶಿಯಸ್ ಫೆಸ್ಟ್ – 2025ರ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶಮ ವಿ ಎಂ ಪ್ರಥಮ ಬಹುಮಾನ, ಮೊನೊಲಾಗ್ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶ್ರೀನಿಧಿ ಪಿ ಎಸ್ ಪ್ರಥಮ ಬಹುಮಾನ, ಶಾರ್ಕ್ ಟ್ಯಾಂಕ್ನಲ್ಲಿ ಪ್ರಥಮ ಪಿಯುಸಿ ವಾಣಿಜ್ಯಶಾಸ್ತ್ರ ವಿಭಾಗದ ಅದ್ವೈತ ಕೃಷ್ಣ ಹಾಗೂ ಕುಲದೀಪ್ ಸೆನ್ ದ್ವಿತೀಯ ಬಹುಮಾನ, ಕೋಡಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ಕಿಶನ್ ಕೆ ಆರ್ ಹಾಗೂ ಶ್ರೇಯಸ್ ತಂಡ ದ್ವಿತೀಯ ಬಹುಮಾನ, ಮಾರ್ಕೆಟಿಂಗ್ನಲ್ಲಿ ಪ್ರಥಮ ಪಿಯುಸಿ ವಾಣಿಜ್ಯಶಾಸ್ತ್ರ ವಿಭಾಗದ ಜೀವಿಕಾ ಹಾಗೂ ಅನಘ ತಂಡ ದ್ವಿತೀಯ ಬಹುಮಾನಕ್ಕೆ ಭಾಜನರಾಗಿದ್ದಾರೆ.