ಪಾಣಾಜೆ: ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕಬಡ್ಡಿ ಪಂದ್ಯಾಟ-  ಉದ್ಘಾಟನಾ ಸಮಾರಂಭ

0

ನಿಡ್ಪಳ್ಳಿ: ದ.ಕ.ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ದ.ಕ.ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ- 2025 ಕಾರ್ಯಕ್ರಮ ಸೆ.3 ರಂದು ಪಾಣಾಜೆ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭ:
ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.ಎಸ್.ಡಿ.ಎಂ.ಸಿ ಅಧ್ಯಕ್ಷ ಉಮ್ಮರ್ ಜನಪ್ರಿಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದರು.ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯ ಸುಭಾಸ್ ರೈ ಚೆಂಬರಕಟ್ಟ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಎ.ವಿ,ಎಜ್ಯುಕೇಶನಲ್ ಎಕ್ಸಲೆಂಟ್ ಫೌಂಡೇಶನ್ ಚೆಯರ್ ಮೆನ್ ಅಮ್ಜದ್ ಖಾನ್ ಪೋಳ್ಯ, ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ನಿಂತಿಕಲ್ ಶ್ರೀದೇವಿ ಅಗ್ರಿಟೆಕ್ ಮಾಲಕ ತಿಮ್ಮಪ್ಪ ರೈ ಬಜದಗುತ್ತು,ಸುಬೋಧ ಪ್ರೌಢಶಾಲಾ ಮುಖ್ಯ ಗುರು ನಿರ್ಮಲ , ಮೂಸೆಕುಂಞ ಹಾಜಿ ಕಂಚಿಲ್ಕುಂಜ, ಆರ್ಲಪದವು ಶಾರದೋತ್ಸವ ಸಮಿತಿ ಅಧ್ಯಕ್ಷ ಪುಷ್ಪರಾಜ್ ರೈ ಕೋಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿವೃತ್ತ ಮುಖ್ಯ ಶಿಕ್ಷಕಿ ಪ್ರತಿಭಾ ಬೊಳ್ಳಿಂಬಳ, ನಿವೃತ್ತ ಶಿಕ್ಷಕಿ ಕಲಾವತಿ ಅರ್.ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಲಲಿತ ಹೆಗಡೆ, ಮಂಗಳೂರು ಪ್ರೌಢಶಾಲಾ ಸಹ ಶಿಕ್ಷಕಿ ಮಾಲತಿ.ಕೆ, ಪೇರಲ್ತಡ್ಕ ಶಾಲಾ ಮುಖ್ಯ ಶಿಕ್ಷಕಿ ಜಾನಕಿ, ಕುಟಿನೋಪಿನಡ್ಕ ಶಾಲಾ ಸಹಶಿಕ್ಷಕಿ ಸುನೀತಾ.ಕೆ, ಉಡುಪಿ ವಕೀಲರ ಸಂಘದ ಕಾರ್ಯದರ್ಶಿ ರಾಜೇಶ್ ಎ.ಆರ್, ಇರ್ದೆ ಪಿ.ಜೆ ಪೆಟ್ರೊಲಿಯಂ ಮಾಲಕ ಕೃಷ್ಣ ನಾಯ್ಕ, ವಿಶ್ವನಾಥ ಪೂಜಾರಿ ಉಡ್ಡಂಗಳ, ಪುತ್ತೂರು ವಿ.ಎ ಬ್ರದರ್ಸ್ ನ ವೇಣು ಗೋಪಾಲ, ಮನ್ಸೂರ್ ಆರ್ಲಪದವು, ಆರ್ಲಪದವು ಅಡಿಕೆ ವ್ಯಾಪಾರಿ ಝಬೀರ್, ವಾಣಿನಗರ ಖಲಂದರ್ ಸ್ಟೋರ್ ನ ಸಂಶುದ್ದೀನ್,ಇರ್ದೆ ಉಪ್ಪಳಿಗೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕನಾಥ, ಪಿ.ಕೆ ಅಬೂಬಕ್ಕರ್, ಶಾಫಿ ಕಂಚಿಲ್ಕುಂಜ,  ಆರ್ಲಪದವು ಬದ್ರಿಯಾ ಹಾರ್ಡ್ ವೆರ್ ನ ರಜಾಕ್, ಜೆ.ಎಸ್ ಸಿಯಾಬುದ್ದೀನ್ ಅಬುಧಾಬಿ, ಆಶ್ರಫ್ ನೆಲ್ಲಿತ್ತಿಮಾರು ಕುವೈತ್, ಶ್ರೀ ಪ್ರಸಾದ್ ಪಾಣಾಜೆ ಇವರುಗಳು ಗೌರವ ಉಪಸ್ಥಿತರಿದ್ದರು.

  (ಚಿತ್ರ: ಹರೀಶ್ ಪಾಣಾಜೆ)

 ಸನ್ಮಾನ ಸಮಾರಂಭ;
ಮಿತ್ತಡ್ಕ ಶಾಲಾ ನಿವೃತ್ತ ಪ್ರಭಾರ ಮುಖ್ಯ ಗುರು ಮುತ್ತಪ್ಪ ಪೂಜಾರಿ, ಕಕ್ಕೂರು ಶಾಲಾ ನಿವೃತ್ತ ಸಹ ಶಿಕ್ಷಕ ವಿಷ್ಣು ಭಟ್ ಮುಂಡೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

   ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ ಪಾಣಾಜೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ ಗಿಳಿಯಾಲು ಸ್ವಾಗತಿಸಿದರು. ಪೇರಲ್ತಡ್ಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ ವಂದಿಸಿದರು. ಶಾಲಾ ಶಿಕ್ಷಕ ಮಾಂಕು ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

 ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು,ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಿವಿಧ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here