ಸೆ.26ಕ್ಕೆ ಊದು ಪೂಜೆ, 27ಕ್ಕೆ ಜಂಡೆ ಮೆರವಣಿಗೆ, ಹುಲಿ ವೇಷ ಪ್ರದರ್ಶನ
ಪುತ್ತೂರು: ದಿ| ಅಕ್ಷಯ ಕಲ್ಲೇಗ ಅವರ ಹೆಸರಿನಲ್ಲಿ ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು ಇವರ 8ನೇ ವರ್ಷದ ಅದ್ದೂರಿ ಪಿಲಿಏಸ-2025 ಆಮಂತ್ರಣ ಪತ್ರ ಸೆ.4ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಸತ್ಯ ಧರ್ಮ ನಡೆಯಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಲಾಯಿತು.

ಟೀಮ್ ಕಲ್ಲೇಗ ಟೈಗರ್ಸ್ನ ಪ್ರಮುಖರು ಜೊತೆಯಲ್ಲಿ ತುಪ್ಪದ ದೀಪ ಬೆಳಗಿಸಿ ಶ್ರೀ ದೇವರ ನಡೆಯಲ್ಲಿಟ್ಟು ಪ್ರಾರ್ಥನೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಹುಲಿ ವೇಷದ ತಂಡ ಯಶಸ್ವಿ ಪ್ರದರ್ಶನ ನೀಡುವಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ ಅವರಿಗೆ ಟೀಮ್ ಕಲ್ಲೇಗ ಟೈಗರ್ಸ್ ತಂಡದಿಂದ ಆಮಂತ್ರಣ ನೀಡಲಾಯಿತು. ದಿ| ಅಕ್ಷಯ್ ಕಲ್ಲೇಗ ಅವರ ತಂದೆ ಚಂದ್ರಶೇಖರ್ ಗೌಡ, ಅಕ್ಷಯ್ ಕಲ್ಲೇಗನ ಇಬ್ಬರು ಸಹೋದರರು. ಪ್ರಮುಖರಾದ ಸರ್ವೇಶ್, ಮನೋಜ್, ನಿಶಾಂತ್ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸೆ. 26ಕ್ಕೆ ಊದುಪೂಜೆ
ಅಕ್ಷಯ್ ಕಲ್ಲೇಗ ಅವರ ನೆನಪಿನಲ್ಲಿ ಟೀಮ್ ಕಲ್ಲೇಗ ಟೈಗರ್ಸ್ ವತಿಯಿಂದ 8ನೇ ವರ್ಷದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಸೆ.26ಕ್ಕೆ ರಾತ್ರಿ ಗಂಟೆ 7ಕ್ಕೆ ಊದುಪೂಜೆ ನಡೆಯಲಿದೆ. ಸೆ.27ಕ್ಕೆ ಬೆಳಿಗ್ಗೆ ಗಂಟೆ 9ಕ್ಕೆ ನೆಹರುನಗರದಿಂದ ಮಹಾಲಿಂಗೇಶ್ವರ ದೇವಸ್ಥಾನದ ತನಕ ಜಂಡೆ ಮೆರವಣಿಗೆ ನಡೆಯಲಿದೆ. ಬಳಿಕ ಪುತ್ತೂರಿನ ವಿವಿಧ ಕಡೆಗಳಲ್ಲಿ ಹುಲಿವೇಷ ಪ್ರದರ್ಶನ ನಡೆಯಲಿದೆ. ಊದು ಪೂಜೆಯ ದಿನ ಮಧ್ಯಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ ಎಂದು ತಂಡದ ಸರ್ವೇಶ್, ನಿಶಾಂತ್ ಮತ್ತು ಮನೋಜ್ ಅವರು ಮಾಹಿತಿ ನೀಡಿದರು.