ಪುತ್ತೂರು: ತೆಂಕಿಲ ಕೊಡಂಗೆ ನಿವಾಸಿ ಜಯರಾಮ ನಾೖಕ್ (72ವ) ಕೊಡಂಗೆ ಹೃದಯಾಘಾತದಿಂದ ಸೆ.5 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ವೇದಾವತಿ, ಪುತ್ರರಾದ ರೂಪೇಶ್ ನಾೖಕ್,ನಿತಿನ್ ನಾೖಕ್, ಸಚಿನ್ ನಾೖಕ್ , ಪುತ್ರಿ ಶಮ್ಮಿಕಾ, ಅಳಿಯ ಮನೋಹರ್ ನಾೖಕ್, ಸೊಸೆ ಜ್ಯೋತಿ ರೂಪೇಶ್, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಹಲವಾರು ವರ್ಷಗಳ ಹಿಂದೆ ದರ್ಬೆ ಮಹಾಲಿಂಗೇಶ್ವರ ಗ್ಯಾರೇಜ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಈಗ ಎ.ಪಿ.ಎಂ.ಸಿ ರಸ್ತೆಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು.