ಪುತ್ತೂರು: ಆತ್ರೇಯ ಮಲ್ಟಿ ಸ್ಪೆಶಾಲಿಟಿ ಕ್ಲಿನಿಕ್ ಪುರುಷರಕಟ್ಟೆ ಇವರ ನೇತೃತ್ವದಲ್ಲಿ ಪುರುಷರಕಟ್ಟೆಯ ಸರಸ್ವತಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಅತ್ರೇಯ ಮಲ್ಟಿ ಸ್ಪೆಷಲಿಟಿ ಕ್ಲಿನಿಕ್ ನ ವೈದ್ಯರಾದ ಡಾ. ಸುಜಯ ತಂತ್ರಿ ಮಾತನಾಡಿ, ಆರೋಗ್ಯವೇ ಭಾಗ್ಯ. ಆಹಾರ ಅರೋಗ್ಯಕ್ಕೆ ಕಾರಣ ಎಂದರು.
ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ತೀರ್ಥರಾಮ ಸವಣೂರು, ವಿದ್ಯಾರ್ಥಿ ಸುರಕ್ಷತಾ ಸಮಿತಿ ಅಧ್ಯಕ್ಷ ಸಚಿನ್ ಕಂಪ, ವೈದ್ಯರುಗಳಾದ ಡಾ. ಶ್ರುತಿ ಬಿ. ಕೆ.,ನಿತಿನ್ ಗೌಡ, ಕರುಣ್ ರಾಥೋಡ್, ಉಲ್ಲಾಸ್ ಮತ್ತು ದೇವೇಂದ್ರ ಹಾಗೂ ಸಿಬ್ಬಂದಿಗಳಾದ ಅನುಪಮ, ಸುದೇಶ್, ಶ್ರಾವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಘಟಕದ ವಿದ್ಯಾರ್ಥಿಗಳು ಸಹಕರಿಸಿದರು. ಮುಖ್ಯ ಶಿಕ್ಷಕಿ ಅಖಿಲಾ ಕೆ. ಬಿ. ಸ್ವಾಗತಿಸಿ, ಶಿಕ್ಷಕಿ ಕೀರ್ತನಾ ವಂದಿಸಿದರು. ಶಿಕ್ಷಕಿ ಧನಲಕ್ಷೀ ಕಾರ್ಯಕ್ರಮ ನಿರ್ವಹಿಸಿದರು.