ಪಡುಮಲೆ ದ. ಕ. ಜಿ. ಪಂ. ಹಿ. ಪ್ರಾ. ಶಾಲಾ ವಾರ್ಷಿಕೋತ್ಸವ ʼಚಿಣ್ಣರ ಸಂಭ್ರಮ  2025ʼ ಕಾರ್ಯಕ್ರಮ

0

ಬಡಗನ್ನೂರು : ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಪಡುಮಲೆ ಇದರ ವಾರ್ಷಿಕೋತ್ಸವ, ಚಿಣ್ಣರ ಸಂಭ್ರಮ ಉದ್ಘಾಟನಾ ಕಾರ್ಯಕ್ರಮವು ಡಿ.13 ರಂದು ಶಾಲಾ ವೖೆಶಾಲಿ ಸಭಾಂಗಣದಲ್ಲಿ ನಡೆಯಿತು.

ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷೆ ವೇದಾವತಿ ವಾರ್ಷಿಕೋತ್ಸವ ಧ್ವಜಾರೋಹಣ ನೆರವೇರಿಸಿ ಶುಭ ಹಾರೖೆಸಿದರು.

ಬಹುಮಾನ ವಿತರಣಾ ಸಮಾರಂಭ
ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಗೆ ಎಸ್. ಡಿ. ಯಂ. ಸಿ ಸದಸ್ಯರಿಗೆ ಕ್ರೀಡಾಕೂಟ ಅಯೋಜಿಸಲಾಗಿದ್ದು ಇದರ ಬಹುಮಾನ ವಿತರಣಾ ಸಮಾರಂಭವು ಪೂರ್ವಾಹ್ನ 10 ರಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ನೆಟ್ಟನಿಗೆ ಮೂಡ್ನೂರು ಕ್ಷೇತ್ರದ ಜಿ. ಪಂ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಬಹುಮಾನ ವಿತರಿಸಿ ಮಾತನಾಡಿ,ಮಕ್ಕಳ ವರ್ಷದ ಸಾದನೆ ಪ್ರೋತ್ಸಾಹಿಸುವ ವೇದಿಕೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರೊಂದಿಗೆ ಪೋಷಕರು ಪಾತ್ರ ಮಹತ್ವದಾಗಿದೆ. ಎಂದ ಅವರು ಮುಖ್ಯ ಶಿಕ್ಷಕರಾಗಿದ್ದು ಶಾಲೆ ಸರ್ವಾನ್ಮುಖ ಅಭಿವೃದ್ಧಿ ಶ್ರಮಿಸಿ ಆನಾರೋಗ್ಯದಿಂದ ನಮ್ಮನ್ನು ಅಗಲಿದ್ದ ದೇವಿಪ್ರಸಾದ್ ಕೆ. ಸಿ ಸ್ಮರಣಿಸಿ ಅವರ ಅಗಲುವಿಕೆಗೆ ದುಃಖ ವ್ಯಕ್ತಪಡಿಸಿ, ದೇವಿಪ್ರಸಾದ್ ರವರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ನಡೆಯೋಣ ಎಂದ ಅವರು ಶಾಲೆಯ ಬಗ್ಗೆ ಅಭಿಮಾನ ಮತ್ತು ಮಕ್ಕಳ ಪ್ರೀತಿಯಿಂದ ಸ್ವಂತ ಹಣದಿಂದ ಶಾಲೆಗೆ ಸುಣ್ಣ ಬಣ್ಣ ಹಂಚಿ, ಸುಂದರ ಗೊಳಿಸಿ, ಶಾಲಾ ಮಕ್ಕಳಿಗೆ,,ಹಾಗೂ ಶಿಕ್ಷಕರಿಗೆ, ಮತ್ತು ಆಡುಗೆ ಸಿಬ್ಬಂದಿರವರಿಗೆ ಸಮ ವಸ್ತ್ರ ನೀಡಿರುವ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ರವರ ಉದ್ದಾರ ಮನಸ್ಸಿನ ಬಗ್ಗೆ ಕೊಂಡಾಡಿ ಅವರು ಇದು ಇತರ ಶಿಕ್ಷಕರರಿಗೆ ಮಾದರಿಯಾಗಲಿ ಎಂದು. ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೖೆಸಿದರು.

 ಶಾಲಾ ನಿವೃತ್ತ ಮುಖ್ಯ ಗುರು ನಾರಾಯಣ ಪಾಟಾಳಿ ಪಟ್ಟೆ ರವರು ಮಾತನಾಡಿ ಶಾಲಾ ವಾರ್ಷಿಕೋತ್ಸವ ಎಲ್ಲ ಸಮುದಾಯದ ಕಾರ್ಯಕ್ರಮ ಸಂತೋಷವಾಗುತ್ತಿದೆ. ಪ್ರಾರಂಭದಲ್ಲಿ ಒಂದು ಕೊಠಡಿಯಲ್ಲಿ ಎಲ್ಲ ತರಗತಿಯನ್ನು ನಡೆಸಲಾಗುತ್ತಿತ್ತು. ಸರಕಾರಿ ಶಾಲೆಯಲ್ಲಿ ಬೇಕಾದಷ್ಟು ಸೌಲಭ್ಯಗಳು ಸಿಗುತ್ತಿದೆ ಪೋಷಕರು ಇದನ್ನು ತಿಳಿದುಕೊಂಡು ಮಕ್ಕಳನ್ನು ಹತ್ತಿರ ಸರಕಾರಿ ಶಾಲೆಗೆ ಸೇರಿಸುವಂತೆ ಹೇಳಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವೇದಾವತಿ ರವರು ಸಭಾಧ್ಯಕ್ಷತೆ ಮಹಿಸಿ ಮಾತನಾಡಿ ಶುಭ ಹಾರೖೆಸಿದರು.

ಭಂಡಾರತ್ತಡ್ಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಉಪಾಧ್ಯಕ್ಷ ವಿಜಯ ಸೋಣಂಗೇರಿ, ಪಡುಮಲೆ ಅಂಗನವಾಡಿ ಕಾರ್ಯಕರ್ತೆ ವೀಣಾ, ಎಸ್. ಡಿ. ಎಂ. ಸಿ.ಉಪಾಧ್ಯಕ್ಷೆ ಸುಮಲತಾ ಪಿ.ಎ., ಸಂಧರ್ಭೊಚಿತ ಮಾತನಾಡಿ ಶುಭ ಹಾರೖೆಸಿದರು. 

ವೇದಿಕೆಯಲ್ಲಿ ಶಾಲಾ ಪ್ರಭಾಲ ಮುಖ್ಯ ಶಿಕ್ಷಕಿ ಪರಮೇಶ್ವರಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶುಭಶಂಕರ, ಹಿರಿಯ ವಿದ್ಯಾರ್ಥಿಗಳಾದ ರವಿರಾಜ ಗೌಡ ಸಾರಕೂಟೇಲು , ವಿನಯರಾಜ್ ಎಸ್. ಸಾರಕೂಟೇಲು, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹೇಮಲತಾ ಪಿ. ಎ ಉಪಸ್ಥಿತರಿದ್ದರು

 ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ಎ ಸ್ಸಾಗತಿಸಿ, ಕಲಿಕೆ ಬಹುಮಾನ ಪಟ್ಟಿ ವಾಚಿಸಿದರು.ಜಿಪಿಟಿ ಶಿಕ್ಷಕಿ ಅರುಣಾಕುಮಾರಿ ಪ್ರಸ್ತಾವಿಕ ಮಾತನಾಡಿದರು. ಗೌರವ ಶಿಕ್ಷಕಿ ವೀಲಾಸಿನಿ ವಂದಿಸಿದರು ಅತಿಥಿ ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. GPT ಶಿಕ್ಷಕಿ ಅರುಣಕುಮಾರಿ ವಿ, ಅತಿಥಿ ಶಿಕ್ಷಕಿ ಸೌಮ್ಯ ಕೆ ಗೌರವ ಶಿಕ್ಷಕಿ ವಿಲಾಸಿನಿ ಎ ಅಟೋಟ ಸ್ಪರ್ಧೆಗಳ ಬಹುಮಾನ ಪಟ್ಟಿ ವಾಚಿಸಿದರು.

 ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮವನ್ನು ಮಂಗಳೂರು (HR) MRPLONGC ಗ್ರೂಪ್ ಜನರಲ್ ಮ್ಯಾನೇಜರ್ ಕೇಶವ ಪಾಟಾಳಿ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಸರಕಾರಿ ಶಾಲಾ ವಾರ್ಷಿಕೋತ್ಸವವನ್ನು ಊರಿನವರ ಸಹಕಾರದಲ್ಲಿ ಮತ್ತು ಶಿಕ್ಷಕರ ಮುತ್ತುವರ್ಜಿಯಲ್ಲಿ ಇಷ್ಪೂಂದು ವಿಜೃಂಭಣೆಯಿಂದ ನಡೆಯುತ್ತಿರುವು ಸಂತೋಷ ತಂದಿದೆ.ಇದರ ಉದ್ಘಾಟನೆ ನನಗೆ ಸಿಕ್ಕಿದು ನನ್ನ ಸೌಭಾಗ್ಯ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲಿ ಎಂದು ಶುಭ ಹಾರೖೆಸಿದ ಅವರು ಕಳೆದ 5 ವರ್ಷಗಳಿಂದ ಸುಮಾರು 300ಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಇದರ ಜೊತೆ ಶಿಕ್ಷಣ ಆರೋಗ್ಯ ಸಾಂಸ್ಕೃತಿಕ, ಪ್ರಕೃತಿ ಸೌಂದರ್ಯ ಇತ್ಯಾದಿಳಿಗೆ ನೀಡಲು ಅವಕಾಶ ಇದೆ. ಗ್ರಾಮೀಣ ಪ್ರದೇಶ ಈ ಶಾಲೆಯಲ್ಲಿ ಮತ್ತು ಮಕ್ಕಳ ಆರೋಗ್ಯ ದೃಷ್ಟಿಯಲ್ಲಿ ನಿರ್ಮಾಣ ಗೊಂಡಿರುವಃದು ಸಂತೋಷ ತಂದಿದೆ ಸಂಸ್ಥೆಯು ತನ್ನ ಆದಾಯ ಒಂದಿಷ್ಟು ಪಾಲನ್ನು ಸಮಾಜದ ಅಭಿವೃದ್ಧಿ ಹಂಚಿಕೆ ಮಾಡುತ್ತದೆ ಇದರ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವ ಜವಾಬ್ದಾರಿ ತಮ್ಮಲ್ಲಿದೆ ಎಂದು ಹೇಳಿ ಶುಭ ಹಾರೖೆಸಿದರು.

ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಲಾ ವಾರ್ಷಿಕೋತ್ಸವ ಮಕ್ಕಳಲ್ಲಿರುವ ಬಹುಮುಖ ಪ್ರತಿಭೆ ಅನಾವರಣ ಗೊಳಿಸುವ ವೇದಿಕೆ ಇಂದಿನ ಮಕ್ಕಳೇ ಇಂದಿನ ಜನಾಂಗ, ನಾಳೆಂತ ಇಲ್ಲ. ಮಕ್ಕಳನ್ನು ಒಳೆಯ ರೀತಿ ಪೋಷಕರಿಗೆ ಅರ್ಪಣೆಮಾಡುವ ಕೆಲಸ ಸಂಸ್ಥೆಯಲ್ಲಿ ಆಗುತ್ತದೆ. ಸಂಸ್ಥೆಯ ಉಚ್ಚಾಯ ಸ್ಥಿತಿ ತಂದು ಎಲ್ಲರ ಪ್ರೀತಿ ಪಾತ್ರರಾಗಿ ಉತ್ತಮ ಶಿಕ್ಷಕ ಎಂದು ಜನಪ್ರಿಯತೆ ಹೊಂದಿದ್ದ ದೇವಿಪ್ರಸಾದ್ ಕೆ. ಸಿ ರವರು ಕರ್ತವ್ಯ ಪ್ರಜೆಯಲ್ಲಿ ತನ್ನ ಆನಾರೋಗ್ಯವನ್ನು ಲೆಕ್ಕಿಸದೆ ವಿಧಿ ಲೀಲೆಯಂತೆ ನಮ್ಮನ್ನು ಅಗಲಿದ್ದಾರೆ. ಇಂದು ಅವರನ್ನು ಸ್ಮರಣಿಸಲೇ ಬೇಕಾದ ದಿನವಾಗಿದೆ ಅವರು ಇಲ್ಲದಿದ್ದರೂ ಅವರ ನೆನಪು ಶಾಸ್ವತ ಆವರು ಹಾಕಿಕೊಟ್ಟ ಅದರ್ಶ ಮತ್ತು ಮಾರ್ಗದರ್ಶನದಲ್ಲಿ ಮುಂದುವರಿಯೋಣ, ಎಂದ ಅವರು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಸವಾಲು ನಮ್ಮೆಲ್ಲರಲ್ಲಿದೆ ಗುಣಮಟ್ಟ ಮತ್ತು ಮೌಲ್ಯಾಯುತ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಸಿಗುತ್ತದೆ ಜೊತೆಗೆ ವಿವಿಧ ಸೌಲಭ್ಯಗಳು ದೊರೆಯುತ್ತದೆ ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹತ್ತಿರದ ಸರಕಾರಿ ಶಾಲೆಗೆ ಸೇರಿಸುವ ಮೂಲಕ ನಮ್ಮೂರ ಸರಕಾರಿ ಶಾಲೆಯನ್ನು ಉಳಿಸಿಬೆಳೆಸೋಣ ಎಂದು ಹೇಳಿ ಶುಭ ಹಾರೖೆಸಿ, ಸುಮಾರು 15ಲಕ್ಷ ರೂಪಾಯಿ ಸಿ ಎಸ್ ಆರ್ ಅನುದಾನದಲ್ಲಿ ಸುವ್ಯವಸ್ಥಿತವಾದ ಶೌಚಾಲಯ ನಿರ್ಮಿಸಿ ಕೊಟ್ಟ ಮಂಗಳೂರು ಎಂ ಆರ್. ಪಿ. ಎಲ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಕುಂಬ್ರ ಕ್ಲಸ್ಟರ್ ನಿಕಟಪೂರ್ವ ಸಿ. ಆರ್. ಪಿ ಶಶಿಕಲಾ ಬಿ ಮಾತನಾಡಿ ಶಾಲಾ ವಾರ್ಷಿಕೋತ್ಸವ ನಮ್ಮೆಲ್ಲರ ಹಬ್ಬ.ಮಕ್ಕಳ ಪ್ರತಿಭೆ ಆನಾವರಣಗೊಳಿಸುವ ವೇದಿಕೆ ಎಂದು ಹೇಳಿ ಶುಭ ಹಾರೖೆಸಿದರು.

ಸಭಾ ಕಾರ್ಯಕ್ರಮವು ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ದೇವಕಜೆ,ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಬಡಗನ್ನೂರು ಗ್ರಾ. ಪಂ ಸದಸ್ಯೆ ಕಲಾವತಿ ಎಸ್. ಗೌಡ ಪಟ್ಲಡ್ಕ ಮಾತನಾಡಿ ಕನಸಿ ಕೂಸು ವಿದ್ಯಾ ನಿಧಿ ಮೂಲಕ ಶಾಲಾ ಮಕ್ಕಳ ಸಂಖ್ಯೆ ಹೆಚ್ಚಾಳಕೆ ದೇವಿಪ್ರಸಾದ ಕಾರಣಕರ್ತರು ಮಕ್ಕಳನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಮತ್ತು ಮಕ್ಕಳ ಭಾಂದವ್ಯ ಉತ್ತಮ. ಎಂದು ಹೇಳಿ ಶಭ ಹಾರೖೆಸಿದರು.

ವೇದಿಕೆಯಲ್ಲಿ ಬಡಗನ್ನೂರು ಗ್ರಾ. ಪಂ ಸದಸ್ಯರಾದ  ರವಿರಾಜ್ ರೈ ಸಜಂಕಾಡಿ, ಜ್ಯೋತಿ ಅಂಬಟೆಮೂಲೆ ಪ್ರಗತಿಪರ ಕೃಷಿಕ ಹೊನ್ನಪ್ಪ ಗೌಡ ಸಾರಕೂಟೇಲು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವೇದಾವತಿ, ಉಪಾಧ್ಯಕ್ಷೆ ಸುಮಲತಾ ಪಿ.ಎ. ಉಪಸ್ಥಿತರಿದ್ದರು. ಶಾಲಾ ಗೌರವಾಧ್ಯಕ್ಷ ರವಿರಾಜ ರೖೆ ಸಜಂಕಾಡಿ ಸ್ವಾಗತಿಸಿದರು ಜಿಪಿಟಿ ಶಿಕ್ಷಕಿ ಅರುಣಾಕುಮಾರಿ ವಂದಿಸಿದರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ಎ ವರದಿ ಮಂಡಿಸಿದರು. ಕೆಯ್ಯೂರು ಕೆ. ಪಿ. ಎಸ್ ಶಾಲಾ ಮುಖ್ಯ ಶಿಕ್ಷಕ ಬಾಬು ಹಾಗೂ ಶಾಲಾ ಅತಿಥಿ ಶಿಕ್ಷಕಿ ಸೌಮ್ಯ ಕೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಿತು  ಸಾಂಸ್ಕೃತಿಕ ಕಾರ್ಯಕ್ರಮ ಬಡಗನ್ನೂರು ಗ್ರಾ. ಪಂ ಸದಸ್ಯೆ ಕಲಾವತಿ ಎಸ್ ಗೌಡ ಉದ್ಘಾಟನೆ ನೆರವೇರಿಸಿದರು ಕಾರ್ಯಕ್ರಮವನ್ನು ಅತಿಥಿ ಶಿಕ್ಷಕಿ ಸೌಮ್ಯ ಕೆ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

ಸನ್ಮಾನ ಕಾರ್ಯಕ್ರಮ
ಸುಮಾರು 15 ಲಕ್ಷ ಸಿ. ಎಸ್. ಆರ್ .ಆನುದಾನದಲ್ಲಿ ಶೌಚಾಲಯ ಕೊಠಡಿ ನಿರ್ಮಾಣ ಮಾಡಿಕೊಟ್ಟ ಎಂ. ಆರ್. ಪಿ. ಎಲ್ ಸಂಸ್ಥೆಯ ಪ್ರತಿನಿಧಿ ಕೇಶವ ಪಾಟಾಳಿ,, ನೂತನ ಶೌಚಾಲಯ ಕೊಠಡಿ ನಿರ್ಮಾಣ ಕ್ಕೆ ಶ್ರಮಿಸಿದ ಕುಂಬ್ರ ಕ್ಲಸ್ಟರ್ ನಿಕಟಪೂರ್ವ ಸಿ. ಆರ್. ಪಿ ಶಶಿಕಲಾ ಬಿ ಹಾಗೂ 21 ವರ್ಷಗಳಿಂದ ಅಕ್ಷರದಾಸೋಹ ಸಿಬಂದಿಯಾಗಿ ಸೇವೆ ಸಲ್ಲಿಸುತ್ತ ಬರುತ್ತಿರುವ ಶಾರದ ಕಾಮತ್ ಮತ್ತು ನಿವೃತ್ತ ಮುಖ್ಯ ಗುರು ದೇವಿಪ್ರಸಾದ್ ರವರ ಸ್ಮರಣಾರ್ತ ಅವರ ಪತ್ನಿ ಶರ್ಮಿಳಾ ಮತ್ತು ಪುತ್ರ ಕೌಸಿಕ್,  ಪ್ರಭಾರ ಮುಖ್ಯ ಗುರು ಪರಮೇಶ್ವರಿ ಎ ಮತ್ತು ಆವರ ಪುತ್ರಿ ಸ್ವಸ್ತಿಕಾ ಹಾಗೂ ಕೆಯ್ಯೂರು ಕೆಪಿಎಸ್ ಶಾಲಾ ಪದವೀಧರ ಮುಖ್ಯ ಶಿಕ್ಷಕ  ಬಾಬು ಮಾಸ್ಟರ್ ರವರುಗಳನ್ನು ಸಾಲು  ಹೊದಿಸಿ ಹಾರ ಹಾಕಿ ಫಲಾಪುಷ್ಪ ಸ್ಮರಣಿಕೆ ನೀಡಿ ಅಭಿಂಧನೆ ಮಾಡಲಾಯಿತು.

ಬಾಂಡ್ ವಿತರಣೆ
ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ರೂ 1000ದಂತೆ ನಿಶ್ಚಿತ ಠೇವಣಿ (ವಿದ್ಯಾ ನಿಧಿ) ಇಡುತ್ತಿದ್ದು ಅದರ ಬಾಂಡ್ ನ್ನು ಸಭಾ ಕಾರ್ಯಕ್ರಮದಲ್ಲಿ ಪೋಷಕರಿಗೆ ವಿತರಿಸಲಾಯಿತು.

ಶಾಲೆಯ ಬಗ್ಗೆ ಅಭಿಮಾನದಲ್ಲಿ ಮತ್ತು ಮಕ್ಕಳ ಮೇಲಿನ ಪ್ರೀತಿಯಿಂದ  ಗ್ರಾಮೀಣ ಪ್ರದೇಶದ ಒಂದು ಸರಕಾರಿ ಶಾಲೆಯ ವಾರ್ಷಿಕೋತ್ಸವ ಪಟ್ಟಣ ಪ್ರದೇಶದ ಶಾಲೆಗಿಂತ ಕಡಿಮೆ ಆನ್ನುವ ರೀತಿಯಲ್ಲಿ ವಿಜೃಂಭಣೆಯಿಂದ  ವಾರ್ಷಿಕೋತ್ಸವ ನಡೆಯುವ ಉದ್ದೇಶದಲ್ಲಿ ಸಮಾರು 50 ಸಾವಿರ ರೂಪಾಯಿ ವೆಚ್ಚದಲ್ಲಿ ಶಾಲೆಗೆ ಸುಣ್ಣ ಬಣ್ಣಗಳಿಂದ  ಶೃಂಗಾರ, ಸುಮಾರು 30 ಸಾವಿರ ವೆಚ್ಚದಲ್ಲಿ  ಶಾಲಾ ಮಕ್ಕಳಿಗೆ, ಶಿಕ್ಷಕ ವೃಂದದವರಿಗೆ, ಅಡುಗೆ ಸಿಬ್ಬಂದಿಗಳಿಗೆ, ಎಸ್. ಡಿ. ಯಂ. ಸಿ ಸದಸ್ಯರಿಗೆ  ಸಮವಸ್ತ್ರ ಉಡುಗೊರೆಯಾಗಿ ನೀಡುವ ಮೂಲಕ ಒಟ್ಟು ಸುಮಾರು 80 ಸಾವಿರ ಸ್ಸಂತ ಹಣ ವ್ಯಯ ಮಾಡಿದ  ಪಡುಮಲೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ಎ ರವರು ತಾಲೂಕಿನಲ್ಲಿಯೇ ಮಾದರಿ ಶಿಕ್ಷಕಿಯಾಗಿ ಪ್ರಚಾಳಿತರಾಗಿದ್ದಾರೆ

LEAVE A REPLY

Please enter your comment!
Please enter your name here