ಪುತ್ತೂರು: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆಯು ಸೆ.6ರಂದು ನಡೆಯಿತು. ಸಭಾ ಕಾರ್ಯಕ್ರಮವು ಕಾಲೇಜಿನ ಸಂಯೋಜಕ ಡಾ. ಸುರೇಶ್ ಇವರ ಅನುಮತಿಯೊಂದಿಗೆ ನಡೆಯಿತು.
ಸಭಾಧ್ಯಕ್ಷ ಇತಿಹಾಸ ವಿಭಾಗ ಉಪನ್ಯಾಸಕ ಡಾ. ಸೀತಾರಾಮ ಪಿ. ಉದ್ಘಾಟಿಸಿ, ಯಾವುದೇ ಹಬ್ಬದ ಮೂಲ ಮೌಲ್ಯಯುತ ಸಾರವನ್ನು ಉಳಿಸಿ, ಸಾಮಾಜಿಕವಾಗಿ ಅನ್ವಯಿಸಿದಾಗ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡ ವಿಭಾಗ ಉಪನ್ಯಾಸಕ ಡಾ. ಆನಂದ ಎಮ್. ಕಿದೂರು ಭಾಗವಹಿಸಿದರು.
ವಾಣಿಜ್ಯ ವಿಭಾಗ ಉಪನ್ಯಾಸಕಿ ಪಾವನ, ಸ್ವಾಗತಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ವೀಕ್ಷಾ ವಂದಿಸಿದರು. ತೃತೀಯ ಬಿಕಾಂ ವೃಂದಾ ಮತ್ತು ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.