ಉಪ್ಪಿನಂಗಡಿ : ಇಲ್ಲಿನ ರಾಮನಗರ ದೂಜಮೂಲೆ ನಿವಾಸಿ , ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಮಾಧವ ಸಪಲ್ಯ (73) ಕೆಲ ದಿನಗಳ ಅನಾರೋಗ್ಯದಿಂದಾಗಿ ಸೆ.7ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಒರ್ವ ಹೆಣ್ಣು, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. 80- 90 ರ ದಶಕದಲ್ಲಿ ಸಂಘದ ಕಾರ್ಯಚಟುವಟಿಕೆಗೆ ಎದುರಾಗುತ್ತಿದ್ದ ಹಿಂಸಾತ್ಮಕ ಅಡೆತಡೆಗಳನ್ನು ಎದುರಿಸುತ್ತಿದ್ದ ಇವರು ಉಪ್ಪಿನಂಗಡಿಯಿಂದ ಶಿರಾಡಿ ವರೆಗಿನ ಶಾಖಾ ಚಟುವಟಿಕೆಗಳನ್ನು ನಡೆಸಿದ್ದರು.