ಪುತ್ತುರು: ಶ್ರೀರಾಮ ಶಾಲೆಯ ವತಿಯಿಂದ ಉಪ್ಪಿನಂಗಡಿಯ ಮುಳಿಯ ಎಂಬಲ್ಲಿ ಗದ್ದೆ ನಾಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆ ವೈದ್ಯ ಡಾ. ನಿರಂಜನ್ ರೈ ಉದ್ಘಾಟಿಸಿ, ಭತ್ತನಾಟಿ ಕಾರ್ಯಕ್ರಮ ಈ ರೀತಿ ಮಾಡುವುದರಿಂದ ಮಕ್ಕಳಿಗೆ ಪ್ರಾಯೋಗಿಕವಾಗಿ ಭತ್ತ ಬೆಳೆಯುವ ಕ್ರಮ ತಿಳಿಯಲು ಇದು ಸಹಾಯಕವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ದ ನಿವೃತ್ತ ಸೈನಿಕ, ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಏಜೆನ್ಸಿಸ್ ಮಾಲಕ ಚಂದಪ್ಪ ಮೂಲ್ಯ ಮಾತನಾಡಿ, ಮಕ್ಕಳು ತಮ್ಮ ಸ್ವ ಅನುಭವದ ಮೂಲಕ ಭತ್ತ ಬೆಳೆಯುವುದನ್ನು ಕಲಿಯಬಹುದು ಎಂದು ತಿಳಿಸಿ, ಈ ಭತ್ತ ಬೆಳೆಯುವುದು ಇದರ ಫಸಲು ಬರಲು ಎರಡು ಮೂರು ತಿಂಗಳು ಕಳೆಯುತ್ತದೆ, ಎಂದು ತಿಳಿಸಿ ಅವರು ಶಾಲಾ ಅನ್ನಬ್ರಹ್ಮ ಯೋಜನೆಗೆ ರೂಪಾಯಿ 25,000/ ವನ್ನು ಆಡಳಿತ ಮಂಡಳಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಶಾಲಾ ಸಂಚಾಲಕ ಯು ಜಿ ರಾಧಾ ಮಾತನಾಡಿ, ಭತ್ತನಾಟಿಯಿಂದ ವರ್ಷದಲ್ಲಿ ಸುಮಾರು 25,000 ರೂಪಾಯಿ ನಷ್ಟ ಅನುಭವಿಸಿದರೂ, ನಮ್ಮ ಮಕ್ಕಳು ಪಡೆಯುವ ಅನುಭವ ಅದಕ್ಕಿಂತ ಮಿಗಿಲಾದದ್ದು ಎಂದು ಹೇಳಿದರು.

ಗದ್ದೆ ಬೇಸಾಯದಲ್ಲಿ ಹಿರಿಯ ರೈತರಾದ ಚಿದಾನಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುನಿಲ್ ಅಣಾವು, ಸದಸ್ಯರಾದ ಜಯಂತ್ ಪೊರೋಳಿ. ಗುಣಕಾರ ಅಗ್ನಾಡಿ, ಕೈಲಾರ್ ರಾಜಗೋಪಾಲ್ ಭಟ್ , ಕಲಾವತಿ ಹೆಗ್ಡೆ,ಮುಳಿಯ ಕುಟುಂಬದ ಹಿರಿಯರು, ಪೋಷಕ ಸಂಘದ ಅಧ್ಯಕ್ಷರಾದ ಮೋಹನ್ ಭಟ್ ಹಾಗೂ ಮಾತೃಭಾರತಿ ಅಧ್ಯಕ್ಷರಾದ ಸಂಧ್ಯಾಪ್ರಭಾ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೌಢ ವಿಭಾಗದ ಮುಖ್ಯಸ್ಥರಾದ ರಘುರಾಮ ಭಟ್ ಸಿ . ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯ ಮಾತಾಜಿ ಉಷಾ ವಂದಿಸಿದರು. ಶ್ರೀಮತಿ ಮಧುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.