ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಬಳಿಯಿರುವ ನಾರಾಯಣ ಆರ್ಕೇಡ್ನಲ್ಲಿ ಆಯುಷ್ ಕ್ಲಿನಿಕಲ್ ಲ್ಯಾಬೋರೇಟರಿ ಉದ್ಘಾಟನೆಗೊಂಡಿತು.
ಕ್ಲಿನಿಕ್ನ ಮಾಲಕರ ತಾಯಿ ಐರಿನ್ ಲೋಬೋ ದೀಪ ಪ್ರಜ್ವಲನೆಗೈದರು. ಹಿರಿಯ ವೈದ್ಯ ಡಾ. ಕೆ.ಜಿ. ಭಟ್ ಉದ್ಘಾಟಿಸಿದರು. ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ವಂ. ಜೆರಾಲ್ಡ್ ಡಿಸೋಜಾ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ, ಹಿರಿಯ ಮುಸ್ಲಿಂ ಧಾರ್ಮಿಕ ಪಂಡಿತ ಎಸ್.ಬಿ. ಮಹಮ್ಮದ್ ದಾರಿಮಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಶೆಣೈ ಕ್ಲಿನಿಕ್ನ ಡಾ. ಎಂ. ಆರ್. ಶೆಣೈ, ನಾರಾಯಣ ಆರ್ಕೇಡ್ನ ಮಾಲಕ ಕೃಷ್ಣ ಎಂ.ಎನ್., ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಯತೀಶ್ ಕುಮಾರ್ ಶೆಟ್ಟಿ, ಡಾ. ರಘು ಬಿ., ಡಾ. ರವೀಂದ್ರ ಐತಾಳ್, ರಶೀದ್, ರವೀಂದ್ರ ಡಿ., ಸತ್ಯನಾರಾಯಣ ಕೈಲಾರ್, ಗೋಪಾಲ ಹೆಗ್ಡೆ, ಸುಜೀರ್ ನಾಯಕ್, ನವೀನ್ ಬ್ರಾಗ್ಸ್, ಕೆನ್ಯೂಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಫಾ. ಸೂರಜ್ ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ವಿನ್ಸೆಂಟ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಸಂದೀಪ್ ಲೋಬೋ, ಡಾ. ಸುಪ್ರೀತ್ ಲೋಬೋ ಅತಿಥಿಗಳನ್ನು ಬರಮಾಡಿಕೊಂಡರು.