ಪುತ್ತೂರು: ಇತ್ತೀಚೆಗೆ ಬಂಟ್ವಾಳ ವ್ಯಾಪ್ತಿಯಲ್ಲಿ ಗೋವು ಕಳ್ಳತನ ಮತ್ತು ಮಾಂಸಗಾರಿಕೆ ಪ್ರಕರಣ ಸಂಭವಿಸಿದ್ದು, ಇದು ಖಂಡನೀಯ ತಪ್ಪಿತಸ್ಥರಿಗೆ ಕಾನೂನಡಿಯಲ್ಲಿ ಶಿಕ್ಷೆ ಆಗಲಿ ಎಂದು ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಆಗ್ರಹಿಸಿದ್ದಾರೆ.
ಈ ಘಟನೆಯನ್ನು ವಿರೋಧಿಸಿ ಕೆಲವು ವ್ಯಕ್ತಿಗಳು ಪ್ರತಿಭಟನೆ ನಡೆಸಿದರು. ಜನರ ಆಹಾರದ ಹಕ್ಕಿನ ವಿರುದ್ಧ ಕಳೆದ ಹಲವಾರು ದಶಕಗಳಿಂದ ಗೋವಿಕ್ರಯ, ಗೋಸಾಗಾಟ, ಗೋಮಾಂಸಗಾರಿಕೆ, ಗೋಭಕ್ಷಣದ ಬಗ್ಗೆ ಜೀವಂತ ವಿವಾದಗಳೇ ಎದ್ದು ನಿಂತಿದೆ. ಈ ವಿವಾದವನ್ನು ನಗದೀಕರಿಸಿದ ಸಂದರ್ಭಗಳೇ ಅಧಿಕ. ಇಂತಹ ಬೆಳವಣಿಗೆಗಳು ಈ ವಾತಾವರಣವನ್ನು ಸೃಷ್ಟಿಸಿರುವುದು ಕೂಡ ಖೇದಕರ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.