ಪುತ್ತೂರು: ಪುತ್ತೂರು ಧಾನ್ಯದ ಬ್ಯಾಂಕ್ನ ಮಹಾಸಭೆಯು ಸೆ.10ರಂದು ಪುತ್ತೂರು ಸ್ವಾಭಿಮಾನ ಸಭಾಭವನದಲ್ಲಿ ಬ್ಯಾಂಕ್ನ ಅಧ್ಯಕ್ಷ ಯು.ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ಯಾಂಕ್ 2024-25ನೇ ಸಾಲಿಗೆ ಶೇ.25 ಡಿವಿಡೆಂಟ್ ಅನ್ನು ಘೋಷಣೆ ಮಾಡಿದ್ದು, ಮುಂದೆ ಸಂಘದ ಪಾಲು ಬಂಡವಾಳ ಹೆಚ್ಚಿಸಲು ಸದಸ್ಯರನ್ನು ಮನವಿ ಮಾಡಲಾಯಿತು.
ಸನ್ಮಾನ:
ಸಂಘದಲ್ಲಿ ಸುಮಾರು 51 ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿ ಸಂಘದ ಕಾರ್ಯದರ್ಶಿ ಪಿ.ಯತೀಂದ್ರನಾಥ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಯು.ಲೋಕೇಶ್ ಹೆಗ್ಡೆ, ಅಜಿತ್ ಕುಮಾರ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಜಯರಾಜ್ ಯು, ಸಂಜೀವ ನಾಯಕ್, ನಾರಾಯಣ ನಾಯ್ಕ, ಸುಧಾ ನಾಗೇಶ್ ರಾವ್, ರಾಜೇಶ್ ಬನ್ನೂರು, ಸಂತೋಷ್ ಕುಮಾರ್, ನಹುಷ ಪಿ.ವಿ ಮತ್ತು ಸದಸ್ಯರಾದ ಕಿಶೋರ್ ನೆಲ್ಲಿಕಟ್ಟೆ, ಪಾಂಡುರಂಗ ಹೆಗ್ಡೆ, ನಾಗೇಶ್ ರಾವ್, ಯತೀಂದ್ರನಾಥ್, ಬಿ.ನಾರಾಯಣ ಹೆಗ್ಡೆ, ಅಶ್ವತ ಶೆಟ್ಟಿ, ನೂತನ ಸದಸ್ಯರಾದ ಸತೀಶ್ ನಾಕ್,ಧರ್ನಪ್ಪ ಗೌಡ ಉಪಸ್ಥಿತರಿದ್ದರು.