





ಪುತ್ತೂರು: ಅನ್ಸ್ವಾರಿಯಾ ಜುಮಾ ಮಸೀದಿ ಬುಳೇರಿಕಟ್ಟೆ ಮಂಜ ಇದರ 2025-26ನೇ ಸಾಲಿನ ಗೌರವಾಧ್ಯಕ್ಷರಾಗಿ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಅಧ್ಯಕ್ಷರಾಗಿ ಅಬ್ದುಲ್ ಹಕೀಮ್ ಸುಪ್ರೀಂ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಪುನರಾಯ್ಕೆಗೊಂಡಿದ್ದಾರೆ.


ಬುಳೇರಿಕಟ್ಟೆ ಅನ್ಸ್ವಾರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆದ ಕಮಿಟಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಆಲಿಕುಂಜಿ ಪೈಸಾರಿ, ಜೊತೆ ಕಾರ್ಯದರ್ಶಿಯಾಗಿ ಇಲ್ಯಾಸ್, ಕೋಶಾಧಿಕಾರಿಯಾಗಿ ಅಶ್ರಫ್ ನೆಡಿಮಾರ್ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ಅಶ್ರಫ್ ಕೆ ಬಿ, ಮುಹಮ್ಮದ್ ಇಸಾಕ್, ಅಬ್ಬುಚ್ಚ ಬೂಡು, ಸುಲೈಮಾನ್, ಅಬ್ದುಲ್ ರಹ್ಮಾನ್ ಲೋಕ್ಕೋನಿ, ಅಬೂಬಕರ್ ಕಟ್ಟೆ ಆಯ್ಕೆಯಾದರು.















