ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ಕೇರಿಯವರ ತಾಯಿ ಸೇರಾಜೆಗುತ್ತು ರತ್ನಾವತಿ ರೈ (76 ವರ್ಷ) ರವರು ಸೆ.14 ರಂದು ರಾತ್ರಿ ನಿಧನರಾದರು.
ಮೊಡಪ್ಪಾಡಿಗುತ್ತು ಕೇರಿ ಬಾಲಕೃಷ್ಣ ರೈಯವರ ಪತ್ನಿಯಾಗಿರುವ ರತ್ನಾವತಿ ರೈಯವರು ಪುತ್ರಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಭವ್ಯ ವಿದ್ಯಾಪ್ರಸಾದ್ ಶೆಟ್ಟಿ, ಪುತ್ರ ಮಹೇಶ್ ರೈ ಕೇರಿ, ಅಳಿಯ ಬೆಳ್ಳಿಪ್ಪಾಡಿ ಗುತ್ತಿನಮನೆ ವಿದ್ಯಾಪ್ರಸಾದ್ ಶೆಟ್ಟಿ, ಸೊಸೆ ಶಿಲ್ಪಾ ಮಹೇಶ್ ಸೇರಿದಂತೆ ಮೊಮ್ಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.