ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ‘ಇನ್ಸೈಟ್ ಐಕಾನ್ಸ್ 2K25’ ವಿಶೇಷಾಂಕ ಬಿಡುಗಡೆ

0

ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.9ರಂದು ‘ಇನ್ಸೈಟ್ ಐಕಾನ್ಸ್-2K25 ವಿಶೇಷಾಂಕವನ್ನು ಬಿಡುಗಡೆ ಮಾಡಲಾಯಿತು.

ವಿದ್ಯಾರ್ಥಿ ಅಲಾವುದ್ದೀನ್ ಪ್ರಾರ್ಥಿಸಿದರು. 9ನೇ ತರಗತಿಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.  ಪ್ರಾಂಶುಪಾಲ ರಂಝಿ ಮೊಹಮ್ಮದ್ ಕೆ.ಪಿ, ಸದರ್ ಮುಅಲ್ಲಿಮ್ ಅಬ್ದುಲ್ ರಶೀದ್ ಸಖಾಫಿ, ಇಸಿಸಿಇ ಸಂಯೋಜಕಿ ಶ್ರುತಿ ಶೆಟ್ಟಿ ಕೆ ಮತ್ತು ಶಾಲಾ ಟ್ರಸ್ಟಿ ಖಾದರ್ ಹಾಜಿ ವಿಶೇಷಾಂಕ ಬಿಡುಗಡೆ ಮಾಡಿದರು. ವಿಶೇಷಾಂಕದ ವಿನ್ಯಾಸಗಾರ್ತಿ ಮತ್ತು ಸಂಪಾದಕಿಯಾದ ಶಿಕ್ಷಕಿ ದಿಲ್ಶಾನಾ  ಮಾತನಾಡಿ, ವಿಂಟೇಜ್ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಈ ವಿಶೇಷಾಂಕವು ಏಳು ಭಾಷೆಗಳ ಅಂಕಣಗಳನ್ನು ಒಳಗೊಂಡಿರುವುದು ಇದರ ವಿಶೇಷತೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರ ದಿನದ ಆಟಗಳ ಫಲಿತಾಂಶಗಳ ಪ್ರಕಟಣೆ, ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಕೈಯಾರೆ ತಯಾರಿಸಿದ ಫ್ರೇಮ್‌ಗಳ ವಿತರಣೆ ಸೇರಿದಂತೆ ಹಲವು ಸೃಜನಾತ್ಮಕ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಂಝಿ ಮೊಹಮ್ಮದ್ ಕೆ.ಪಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಕೈಯಾರೆ ತಯಾರಿಸಿದ ಎಜುಕೇಟರ್ ಚಾರ್ಟ್ ಮತ್ತು ಇತರ ಸಿದ್ಧತೆಗಳಲ್ಲಿ ತೋರಿದ ಒಲವು ಮತ್ತು ಆಸಕ್ತಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ನಾಯಕ ಮುಹಮ್ಮದ್ ಶಹೀಮ್ ಮತ್ತು ಶಾಲಾ ನಾಯಕಿ ರೀಮಾ ಶಂರಿನ್ ಅವರ ಮುಂದಾಳತ್ವದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ವಿಶೇಷ ಅತಿಥಿಯಾಗಿ ಭಾಗವಹಿಸಿದ ಶಾಲಾ ಟ್ರಸ್ಟಿ ಖಾದರ್ ಹಾಜಿ ಅವರು ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳ ಕಲಾತ್ಮಕ ಕೊಡುಗೆ ಮತ್ತು ಅವರ ಸೃಜನಶೀಲತೆ ಶ್ಲಾಘನೀಯವಾದುದು ಎಂದು ಪ್ರಶಂಸಿಸಿದರು. ವಿದ್ಯಾರ್ಥಿಗಳಿಂದಲೇ ವಿನ್ಯಾಸಗೊಂಡ ಕಾಗದದ ಹೂಗಳು, ಫ್ರೇಮ್‌ಗಳು ಮತ್ತು ಎಜುಕೇಟರ್ ಚಾರ್ಟ್‌ಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.

LEAVE A REPLY

Please enter your comment!
Please enter your name here