ಪುತ್ತೂರು: ಬೊಳುವಾರು ಸೂರ್ಯಪ್ರಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೀರ್ತನಾ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14ರಂದು ಪ್ರಗತಿ ಕಾಲೇಜ್ ಆಫ್ ನರ್ಸಿಗ್ ಸೈನ್ಸ್ನ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಸಂಘದಲ್ಲಿ ವರ್ಷಾಂತ್ಯಕ್ಕೆ 510 ಸದಸ್ಯರನ್ನು ಹೊಂದಿದೆ ರೂ.1,28,15,059 ದುಡಿಯುವ ಬಂಡವಾಳ ಹೊಂದಿದೆ. ರೂ.1,15,08,365.28 ವಿವಿಧ ರೂಪ ಠೇವಣಿ ಹೊಂದಿದೆ. ರೂ.1,01,83,624ನ್ನು ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲ ವಿತರಿಸಾಗಿದ್ದು ವರ್ಷಾಂತ್ಯಕ್ಕೆ ರೂ.1,01,83,584 ಸಾಲ ಹೊರಬಾಕಿಯಿರುತ್ತದೆ. ಸಂಘವು ಮುಂದಿನ ದಿನಗಳಲ್ಲಿ ರೂ.1.20 ಕೋಟಿ ವಿವಿಧ ಠೇವಣಿ ಸಂಗ್ರಹ, ರೂ.1ಕೋಟಿ ಸಾಲ ವಿತರಿಸುವುದು ಹಾಗೂ ಸದಸ್ಯರ ಸಂಖ್ಯೆಯನ್ನು 1000ಕ್ಕೆ ಏರಿಕೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಿರ್ದೇಶಕರಾದ ವಸಂತ ಕಾಮತ್ ಕೆ., ಗೋವಿಂದ ನಾಯಕ್ ಎಸ್.ಎಲ್., ಉದಯ ಕುಮಾರ್ ಎನ್.ಬಿ., ದಿವಾಕರ ಬಳ್ಳಾಲ್, ವಿರೂಪಾಕ್ಷ ಭಟ್, ದೀಪಾ ನಾಯಕ್ ಹಾಗೂ ವೀಣಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್ ವೈ.ಟಿಯವರನ್ನು ಮಹಾಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸ್ವ ಸಹಾಯ ಸಂಘಗಳಿಗೆ ಚಾಲನೆ:
ಸಹಕಾರಿ ಸಂಘದ ಮುಖಾಂತರ ಸ್ವ ಸಹಾಯ ಸಂಘಗಳಿಗೆ ನೂತನವಾಗಿ ಪ್ರಾರಂಭಿಸಲಾಗಿದ್ದು ನೂತನ ಸಂಘ ಸಮೃದ್ಧಿ ಕೀರ್ತನಾ ಸ್ವ ಸಹಾಯ ಸಂಘಕ್ಕೆ ದಾಖಲೆ, ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಸದಸ್ಯೆ ಯಶೋಧ ಬಿ. ಪ್ರಾರ್ಥಿಸಿದರು. ಉಪಾಧ್ಯಕ್ಷ ಪ್ರಸನ್ನ ಕುಮಾರ್ ಕೆ.ಆರ್ ಸ್ವಾಗತಿಸಿದರು. ದಿವ್ಯ ಸಂತೋಷ್ ರೈ ವರದಿ ಹಾಗೂ ಆಯವ್ಯಯಗಳನ್ನು ಮಂಡಿಸಿದರು. ಸಿಬ್ಬಂದಿ ಅರ್ಪಿತಾ ಎನ್.ಬಿ., ಪಿಗ್ಮಿ ಸಂಗ್ರಾಹಕರಾದ ಮನೋರಮಾ, ಕಿಶೋರ್ ಭಟ್, ಹರೀಶ್ ಕುಮಾರ್ ಎನ್ ಸಹಕರಿಸಿದರು. ಸದಸ್ಯೆ ಸುಮನ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ದೀಪಾ ನಾಯಕ್ ವಂದಿಸಿದರು.