ಸಂತ ಫಿಲೋಮಿನ(ಸ್ವಾಯತ್ತ) ಕಾಲೇಜಿನಲ್ಲಿ ಯೂತ್ ರೆಡ್‌ಕ್ರಾಸ್ ಓರಿಯೆಂಟೇಶನ್ ಕಾರ್ಯಕ್ರಮ

0

ಪುತ್ತೂರು: ಯೂತ್ ರೆಡ್ ಕ್ರಾಸ್, ಸೇಂಟ್ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ವತಿಯಿಂದ ಯುವ ರೆಡ್‌ಕ್ರಾಸ್ ಸ್ವಯಂಸೇವಕರಿಗೆ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಪಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯಾರ್ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಶ್ರೇಷ್ಠತೆಯತ್ತ ಗಮನಹರಿಸುವುದಲ್ಲದೆ, ಸ್ಥಳೀಯ ಹಾಗೂ ಸಮುದಾಯ ಕಾರ್ಯಕ್ರಮಗಳ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಸಮಯವನ್ನು ಮೀಸಲಿಡಬೇಕು ಮತ್ತು ಇತರರಿಗೆ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು. ವಿದ್ಯಾರ್ಥಿಗಳು ಅನ್ಯಾಯಗಳನ್ನು ಪ್ರಶ್ನಿಸಬೇಕು. ಮಾನವೀಯತೆ ಇಲ್ಲದ ಶಿಕ್ಷಣ ನಿರರ್ಥಕ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಇಂಗ್ಲಿಷ್ ವಿಭಾಗದ ಸಹಾಯಕ ಉಪನ್ಯಾಸಕಿ ಸುಷ್ಮಾ ಕ್ರಾಸ್ತಾ ಯುವ ರೆಡ್‌ಕ್ರಾಸ್‌ನ ಮೂಲ, ಉದ್ದೇಶಗಳ, ಹಾಗೂ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಆಶ್ಫಿಯಾ ಇಂಟರ್ನ್‌ಗಳ ಪಟ್ಟಿಯನ್ನು ಓದಿದರು ಮತ್ತು ಇಂಟರ್ನ್‌ಗಳನ್ನು ಪುರಸ್ಕರಿಸಲಾಯಿತು. ಯೂತ್ ರೆಡ್‌ಕ್ರಾಸ್ ಸಂಚಾಲಕಿ ಡಾ. ಡಿಂಪಲ್ ಜೆನ್ನಿಫರ್ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರುಮೈಜ್ ಮತ್ತು ಜೋಹರ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು. ಅವನಿ ಮತ್ತು ತಂಡ ಪ್ರಾರ್ಥಿಸಿದರು. ಮುಕ್ಷಿತ್ ಸ್ವಾಗತಿಸಿದರು. ರೋಶನ್ ವಂದಿಸಿದರು. ಮುಜಾಮಿಲ್ ನಿರೂಪಿಸಿದರು.

LEAVE A REPLY

Please enter your comment!
Please enter your name here